ದೇಶದಲ್ಲಿ ಕೋವಿಡ್ ಸಂಖ್ಯೆ ೨೦,೮೮,೬೬೧,
ಚೇತರಿಕೆ ಸಂಖ್ಯೆ ೧೪,೨೭,೦೦೫
ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ಕೊರೋನಾವೈರಸ್ ಸೋಂಕಿನ ೬೧,೫೩೭ ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ 2020 ಆಗಸ್ಟ್ 08ರ ಶನಿವಾರ ೨೦,೮೮,೬೧೧ ಕ್ಕೆ ತಲುಪಿತು. ಇದೇ ವೇಳೆಗೆ ಚೇತರಿಸಿಕೊಂಡ ರೋಗಿಗಳ ಸಂಖ್ಯೆ ೧೪,೨೭,೦೦೫ಕ್ಕೆ ಏರಿದ್ದು, ಚೇತರಿಕೆ ಪ್ರಮಾಣ ಶೇಕಡಾ ೬೮.೩೨ಕ್ಕೆ ಏರಿತು.
ಒಂದೇ ದಿನದಲ್ಲಿ ೯೩೩ ಸಾವುಗಳು ಸಂಭವಿಸಿದ್ದು, ಮೃತರ ಸಂಖ್ಯೆ ೪೨,೫೧೮ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು.
ದೇಶದಲ್ಲಿ ಪ್ರಸ್ತುತ ಕೊರೋನವೈರಸ್ ಕಾಯಿಲೆಯ (ಕೋವಿಡ್ -೧೯) ೬,೧೯,೦೮೮ ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇಕಡಾ ೨೯.೬೪ ರಷ್ಟು ಇದೆ. ಒಂದು ದಿನದಲ್ಲಿ ಒಟ್ಟು ೬೧,೫೩೭ ಪ್ರಕರಣಗಳು ಸೇರ್ಪಡೆಯಾಗಿದ್ದು, ಒಟ್ಟು ಕೋರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ೨೦,೮೮,೬೧೧ ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಹೇಳಿತು.
ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಸತತ ೧೦ ನೇ ದಿನ ೫೦,೦೦೦ವನ್ನು ದಾಟಿದೆ.
ಶುಕ್ರವಾರ ೫,೯೮,೭೭೮ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದುವರೆಗೆ ಒಟ್ಟು ಮಾದರಿ ಪರೀಕ್ಷಾ ಸಂಖ್ಯೆ ೨,೩೩,೮೭,೧೭೧ಕ್ಕೆ ಏರಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
No comments:
Post a Comment