Friday, August 21, 2020

೩ ಜೈನ ದೇಗುಲಗಳಿಗೆ ಸೀಮಿತ ಪ್ರವೇಶ: ಸುಪ್ರೀಂ ಅಸ್ತು

  ಜೈನ ದೇಗುಲಗಳಿಗೆ ಸೀಮಿತ ಪ್ರವೇಶ: ಸುಪ್ರೀಂ ಅಸ್ತು

ನವದೆಹಲಿ: ಆಗಸ್ಟ್ ೨೨ ಮತ್ತು ೨೩ ಶನಿವಾರ ಮತ್ತು ಭಾನುವಾರ ವಿಶೇಷ ಪರಿಷಣ್ ಉತ್ಸವ ಕಾಲದಲ್ಲಿ ಮುಂಬಯಿಯ ದಾದರ್, ಚೆಂಬೂರು ಮತ್ತು ಬೈಕುಲ್ಲಾದ ಮೂರು ಜೈನ ದೇವಾಲಯಗಳಿಗೆ ಭಕ್ತರಿಗೆ ಸೀಮಿತ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ 2020 ಆಗಸ್ಟ್ 21ರ ಶುಕ್ರವಾರ ಅನುಮತಿ ನೀಡಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.. ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು ಒಡಿಶಾ ರಥಯಾತ್ರೆಗೆ ಅವಕಾಶ ನೀಡಿದ್ದನ್ನು ಉಲ್ಲೇಖಿಸಿ, ದಿನಕ್ಕೆ ೨೫೦ ಜನರ ಪ್ರವೇಶಕ್ಕೆ ಮಿತಿ ವಿಧಿಸಿತು.

"ನಮ್ಮ ಅಭಿಪ್ರಾಯವನ್ನು ನಿಷ್ಠೆಯಿಂದ ಪಾಲಿಸಿದರೆ, ಮೂರು ದೇವಾಲಯಗಳಲ್ಲಿ ಪ್ರಾರ್ಥನೆಗೆ ಅನುಮತಿ ನೀಡುವುದು ಅಪಾಯಕಾರಿಯಲ್ಲ" ಎಂದು ನ್ಯಾಯಮೂರ್ತಿಗಳಾದ .ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿತು.

ಒಡಿಶಾ ರಥಯಾತ್ರೆಗೆ ಅವಕಾಶ ನೀಡಿದ ಉದಾಹರಣೆಯನ್ನು ಉಲ್ಲೇಖಿಸಿದ ಪೀಠ, ‘ಇದು ಒಡಿಶಾ ರಥಯಾತ್ರೆಯೊಂದಿಗೆ ನಾವು ಹೊಂದಿದ್ದ ಆಯ್ಕೆಯಾಗಿದೆ. ದೂರವನ್ನು ಕಾಪಾಡಿಕೊಳ್ಳಲಾಗಿದೆಯೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದಿಲ್ಲ ಎಂಬುದನ್ನು ಖಚಿತಪಡಿಸಿದರೆ ಕೇವಲ ರಥಯಾತ್ರೆ ನಡೆಸುವುದರಿಂದ  ಹಾನಿಯಾಗುವುದಿಲ್ಲ ಎಂದು ನಾವು ನಂಬುತ್ತೇವೆ ಎಂದು ಪೀಠ ತಿಳಿಸಿತು.

ದೊಡ್ಡ ಸಮೂಹವನ್ನು ಒಳಗೊಂಡ ಬೇರೆ ಯಾವುದೇ ದೇವಾಲಯಗಳು ಅಥವಾ ಹಬ್ಬಗಳಿಗೆ ತನ್ನ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

"ನಾವು ನಿರ್ದಿಷ್ಟವಾಗಿ ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಗಣೇಶ ಚತುರ್ಥಿ ಸಮಯದಲ್ಲಿ ನಡೆಯುವ ಸಭೆಯನ್ನು ಉಲ್ಲೇಖಿಸುತ್ತಿದ್ದೇವೆ" ಎಂದು ನ್ಯಾಯಾಲಯವು ಬೊಟ್ಟು ಮಾಡಿತು.

ಕೋವಿಡ್ -೧೯ ಸಾಂಕ್ರಾಮಿಕ ರೋಗದಿಂದ ರಾಜ್ಯವು ಹೆಚ್ಚು ಹಾನಿಗೊಳಗಾಗಿದೆ ಮತ್ತು ಕೊರೋನವೈರಸ್ ಕಾಯಿಲೆಯ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಅಧಿಕಾರಿಗಳಿಗೆ ಕಷ್ಟಕರವಾಗಿದೆ ಎಂಬ ಮನವಿಯನ್ನು ಮಹಾರಾಷ್ಟ್ರ ಸರ್ಕಾರ ವಿರೋಧಿಸಿತ್ತು.

ಆದಾಗ್ಯೂ, ಸರ್ಕಾರವು ಇತರ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದೆ ಆದರೆ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿ ನೀಡುತ್ತಿಲ್ಲ ಎಂದು ರಾಜ್ಯದ ನಿಲುವನ್ನು ಪೀಠ ಟೀಕಿಸಿತು.

"ಆರ್ಥಿಕ ಹಿತಾಸಕ್ತಿಗಳನ್ನು ಒಳಗೊಂಡ ಪ್ರತಿಯೊಂದು ಚಟುವಟಿಕೆಗೆ ನೀವು ಅನುಮತಿ ಕೊಡುತ್ತಿರುವುದು ದು ನಮಗೆ ವಿಚಿತ್ರ ಎನಿಸುತ್ತಿದೆ. ಆದರೆ ಅದು ಧರ್ಮವನ್ನು ಒಳಗೊಂಡಿದ್ದರೆ, ಕೋವಿಡ್ ಕಾರಣದಿಂದಾಗಿ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಳುತ್ತೀರಿ ಎಂದು ಸಿಜೆಐ ಬೋಬ್ಡೆ ಹೇಳಿದರು.

ಆಗಸ್ಟ್ ೧೫ ರಿಂದ ೨೨ ರವರೆಗೆ ಪರಿಷಣ್ ಹಬ್ಬದ ದಿನಗಳಲ್ಲಿ ಜೈನ ದೇವಾಲಯಗಳಿಗೆ ಪ್ರವೇಶಿಸಲು ಅನುಮತಿ ನೀಡುವಂತೆ ಅರ್ಜಿದಾgರು ಸಲ್ಲಿಸಿದ್ದ ಮಧ್ಯಂತರ ಪ್ರಾರ್ಥನೆಯನ್ನು ಬಾಂಬೆ ಹೈಕೋರ್ಟ್ ಹಿಂದೆ ತಿರಸ್ಕರಿಸಿತ್ತು.

No comments:

Advertisement