Friday, August 7, 2020

ಗಡಿ ಬಿಕ್ಕಟ್ಟು: ಚೀನಾಕ್ಕೆ ಸೊಪ್ಪು ಹಾಕದ ಭಾರತ

 ಗಡಿ ಬಿಕ್ಕಟ್ಟು: ಚೀನಾಕ್ಕೆ ಸೊಪ್ಪು ಹಾಕದ ಭಾರತ

ನವದೆಹಲಿ: ಚೀನಾವು ಏಪ್ರಿಲ್ ೨೦ರ ಪೂರ್ವದ ಯಥಾಸ್ಥಿತಿ ಪುನಃಸ್ಥಾಪನೆ ಮಾಡುವವರೆಗೆ ಭಾರತೀಯ ಸೇನೆಯು ,೫೯೭ ಕಿಮೀ ಉದ್ಧದ ನೈಜ ನಿಯಂತ್ರಣ ರೇಖೆಯಿಂದ ಕದಲುವುದಿಲ್ಲ ಎಂದು ಭಾರತವು ಚೀನಾಕ್ಕೆ ಖಡಕ್ ಉತ್ತರ ನೀಡಿದೆ.

ಹಾಲಿ ಸ್ಥಿತಿಗತಿಯ ಆಧಾರದಲ್ಲೇ ಮಾತುಕತೆ ಮುಂದುವರೆಸಲು ಚೀನಾದ ಪೀಪಲ್ಸ್ ಲಿಬರೇಶಷನ್ ಆರ್ಮಿಯು ಪ್ರಸ್ತಾಪ ಮುಂದಿಟ್ಟಾಗ ಭಾರತೀಯ ಸೇನೆಯು ತನ್ನ ನಿಲುವನ್ನು ಖಡಕ್ ಶಬ್ದದಲ್ಲಿ ಹೇಳಿದೆ ಎಂದು ವಿಶ್ವಸನೀಯ ಮೂಲಗಳು  2020 ಆಗಸ್ಟ್  07ರ ಶುಕ್ರವಾರ ಹೇಳಿದವು.

ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಪೂರ್ವ ಲಡಾಖ್‌ನ ಘರ್ಷಣೆಯ ಸ್ಥಳಗಳಲ್ಲಿ ಏಪ್ರಿಲ್ ೨೦ಕ್ಕೆ ಪೂರ್ವದ ಸ್ಥಿತಿಯನ್ನು ಪುನಃಸ್ಥಾಪಿಸುವುದು ಭಾರತದ ಪೂರ್ವ ಷರತ್ತು ಆಗಿದೆ ಎಂಬುದಾಗಿ ಭಾರತವು ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಚೀನಾಕ್ಕೆ ತಿಳಿಸಿದೆ. ಆದರೆ ಚೀನಾ ಇದಕ್ಕೆ ಒಪ್ಪಿಲ್ಲ ಎಂದು ಮೂಲಗಳು ಹೇಳಿವೆ.

‘ಪಿಎಲ್‌ಎ ಇದನ್ನು ದೃಷ್ಟಿಯುದ್ಧವನ್ನಾಗಿ ಮಾಡಿದ್ದು, ಭಾರತವು ಕಣ್ಣು ಮಿಟುಕಿಸಬೇಕು ಎಂದು ಬಯಸಿದೆ. ನಾವು ಕಾಯಲು ಸಿದ್ದರಿದ್ದೇವೆ ಮತ್ತು ಗಡಿ ವಿವಾದವು ದ್ವಿಪಕ್ಷೀಯ ಸಂಬಂಧದ ಮೇಲೆ ಬೀರುವ ದುಷ್ಪರಿಣಾಮವನ್ನು ಬೀಜಿಂಗ್ ಅರಿತುಕೊಳ್ಳುವಂತೆ ಮಾಡಲು ಇತರ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಿದ್ದೇವೆಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತವು ಈಗಾಗಲೇ ೧೦೦ ಕ್ಕೂ ಹೆಚ್ಚು ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ಮತ್ತು ಅದರ ತದ್ರೂಪುಗಳನ್ನು ನಿಷೇಧಿಸಿದೆ, ಚೀನಾದ ಸಂಸ್ಥೆಗಳಿಗೆ ಸರ್ಕಾರಿ ಒಪ್ಪಂದಗಳನ್ನು ಪಡೆಯುವುದನ್ನು ತಡೆಯಲು ನಿಯಮಗಳನ್ನು ಬದಲಾಯಿಸಿದೆ ಮತ್ತು ಚೀನಾದ ವಿಶ್ವವಿದ್ಯಾನಿಲಯಗಳೊಂದಿಗೆ ಅಸ್ತಿತ್ವದಲ್ಲಿರುವ ನಿಯಮಗಳನ್ನು ಅನುಸರಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಸುತ್ತಿದೆ.

ಕಮಾಂಡರ್-ಇನ್-ಚೀಫ್ ಕ್ಸಿ ಜಿನ್‌ಪಿಂಗ್ ನೇತೃತ್ವದ ಪಿಎಲ್‌ಎ ಗಡಿಯಿಂದ ಸೇನೆ ವಾಪಸಾತಿ ಮಾಡಿ, ಹಿಂದಿನ ಯಥಾಸ್ಥಿತಿ ಪುನಃಸ್ಥಾಪನೆಯನ್ನು ವಿಳಂಬಗೊಳಿಸಿದಷ್ಟೂ, ಅದು ಭಾರತ-ಚೀನಾ ಸಂಬಂಧಗಳಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ ಎಂಬ ಸಂದೇಶವನ್ನು ಸ್ಪಷ್ಟ ಶಬ್ದಗಳಲ್ಲಿ ಅಲ್ಲದೇ ಹೋದರೂ ಸೂಚ್ಯವಾಗಿ ಭಾರತ ಚೀನಾಕ್ಕೆ ರವಾನಿಸಿದೆ.

ಆದಾಗ್ಯೂ, ಬಿಕ್ಕಟ್ಟು ಮುಂದುವರಿಕೆಯ ವಿಚಾರದಲ್ಲಿ ಭಾರತದ ನಿಲುವನ್ನು ಸರ್ಕಾರಿ ವೆಬ್ ಸೈಟಿನಲ್ಲಿ ಬಹಿರಂಗ ಪಡಿಸಿದ ರಕ್ಷಣಾ ಸಚಿವಾಲಯದ ಟಿಪ್ಪಣಿಯ ಬಳಿಕ ಸ್ಫೋಟಗೊಂಡ ರಾಜಕೀಯ ವಿವಾದದಂತೆ

ಬಿಕ್ಕಟ್ಟು ಕೊನೆಗೊಳಿಸಲು ತನ್ನ ದೇಶೀಯ ಘಟಕಗಳಿಂದ ಬರುವ ಒತ್ತಡಕ್ಕೆ ಸಿಲುಕುವ ಭಾg ಸರ್ಕಾರವು ತನ್ನ ನಿಲುವು ಬದಲಿಸಬಹುದು ಎಂಬ ಆಸೆಯನ್ನು ಚೀನಾ ಇನ್ನೂ ಕೈಬಿಟ್ಟಿಲ್ಲ.

ವೆಬ್‌ಸೈಟ್‌ನಲ್ಲಿ ಇರಿಸಬೇಕಾದ ಸಚಿವಾಲಯದ ಚಟುವಟಿಕೆಗಳನ್ನು ದಾಖಲಿಸುವ ಅಧಿಕಾರಿಯೊಬ್ಬರು, ಬಿಕ್ಕಟ್ಟಿಗೆ ಸಂಬಂಧಿಸಿದ ಕಾರ್‍ಯಾಚರಣೆಯ ವಿವರಗಳನ್ನು ತೆಗೆದುಹಾಕದೆಯೇ ಸಂಪುಟ ಕಾರ್‍ಯದರ್ಶಿಗೆ ಸಲ್ಲಿಸಲಾಗುವ ರಕ್ಷಣಾ ಕಾರ್‍ಯದರ್ಶಿಯ ಮಾಸಿಕ ವರದಿಯನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಲಡಾಖ್‌ನಲ್ಲಿ ಸೇನಾ ವಾಪಸಾಗಿ ಪೂರ್ಣಗೊಂಡಿದೆ ಮತ್ತು ಬಿಕ್ಕಟ್ಟು ಮುಕ್ತಾಯಗೊಂಡಿದೆ ಎಂಬುದಾಗಿ ಜಗತ್ತಿಗೆ ತಿಳಿಸಿದ ಚೀನೀ ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸಿದ ಭಾರತ, ನಿಲುವು ಬದಲಿಸಿ ಧನಾತ್ಮಕ ಪ್ರಗತಿ ಬಗ್ಗೆ ಮಾತನಾಡುವಂತೆ ಚೀನಾಕ್ಕೆ ಸೂಚಿಸಿದೆ.

ವಾಸ್ತವವಾಗಿ ಚೀನಾದ ಪಿಎಲ್‌ಎ ಪಹರೆ ಪಾಯಿಂಟ್ ೧೭ ಮತ್ತು ೧೭ಎಯಲ್ಲಿ (ಗೋಗ್ರಾ ಜನರಲ್ ಏರಿಯಾ) ಮತ್ತು ಪ್ಯಾಂಗಾಂಗ್ ತ್ಸೊ ದಂಡೆಯಲ್ಲಿನ ಫಿಂಗರ್ ಪ್ರದೇಶದಲ್ಲಿ ಕಾಲೆಳೆಯುತ್ತಿರುವ ಬಗ್ಗೆ ಭಾರತೀಯ ಸೇನೆ ಸರ್ಕಾರಕ್ಕೆ ತಿಳಿಸಿತ್ತು.

ಉಭಯ ಕಡೆಗಳ ಸೇನಾ ಕಮಾಂಡರುಗಳ ಸಭೆಯಲ್ಲಿ ಹೊಸ ಸಾಮಾನ್ಯ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ಭಾರತೀಯ ಸೇನೆಯನ್ನು ಒತ್ತಾಯಿಸಲು ಪಿಎಲ್‌ಎ ಯತ್ನಿಸಿತು. ತಾನು ಸ್ವತಃ ದಾಳಿಕೋರನಾಗಿ, ಗಡಿ ಪ್ರಕ್ಷುಬ್ಧತೆಯನ್ನು ಹುಟ್ಟು ಹಾಕಿ ದಶಕಗಳ ಕಾಲ ಉಭಯ ರಾಷ್ಟ್ರಗಳ ಮಧ್ಯೆ ಶಾಂತವಾಗಿದ್ದ ಬಾಂಧವ್ಯವನ್ನು ಕುಲಗೆಡಿಸಿದ್ದಕ್ಕೆ ಭಾರತೀಯ ಸೇನೆಯಿಂದ ಬಹುಮಾನ ಪಡೆಯಲು ಪಿಎಲ್‌ಎ ಬಯಸಿತ್ತು ಎಂದು ಸೇನಾ ಕಮಾಂಡರ್ ಒಬ್ಬರು ತಿಳಿಸಿದರು.

ಏಪ್ರಿಲ್ ಮೇ ತಿಂಗಳಲ್ಲಿ ತಾನು ಇದ್ದ ಜಾಗಕ್ಕೆ ವಾಪಸಾಗುವ ಮುನ್ನ, ಭಾರತವು ತನ್ನ ಪರಂಪರಾಗತ ತಾಣಗಳಿಂದ ಹಿಂದಕ್ಕೆ ಹೋಗಬೇಕು ಎಂದು ಪಿಎಲ್‌ಎ ಬಯಸಿತ್ತು ಎಂದು ಹಿರಿಯ ಸೇನಾ ಅಧಿಕಾರಿ ನುಡಿದರು.

ಉದಾಹರಣೆಗೆ, ಪಿಎಲ್‌ಎಯು ಗೋಗ್ರಾ ಸಮೀಪದ ಕುಗ್ರಾಂಗ್ ನದಿಯ ಸಮೀಪದ ಮೊದಲ ರಿಜ್ ಲೈನ್ ಮೇಲಿನ ತನ್ನ ನೂತನ ಸ್ಥಾನವನ್ನು ಉಳಿಸಿಕೊಳ್ಳಲು ಬಯಸಿದೆ. ಪರಿಣಾಮವಾಗಿ ರಿಜ್ ಲೈನ್ ಮೇಲಿನ ಭಾರತದ ಸ್ವಾಮ್ಯ ಕಡಿಮೆಯಾಗುತ್ತದೆ.

ಪ್ಯಾಂಗೊಂಗ್ ತ್ಸೊದಲ್ಲಿ, ಫಿಂಗರ್ ಮೇಲ್ಭಾಗದಲ್ಲಿ ಇನ್ನೂ ಅಲ್ಪ ಸಂಖ್ಯೆಯಲ್ಲಿ ತಳ ಊರಿರುವ ಪಿಎಲ್‌ಎ, ಭಾರತೀಯ ಪಡೆUಳು ಹಳೆಯ ಫಿಂಗರ್ ೩ರ ಸುತ್ತಣ ಧನ್ ಸಿಂಗ್ ಥಾಪಾ ಪೋಸ್ಟ್ ನಿಂದ ಹಿಂದಕ್ಕೆ ಹೋಗಬೇಕು ಎಂದು ಬಯಸಿದೆ. ಗೋಗ್ರಾ ಜನರಲ್ ಏರಿಯಾದಲ್ಲೂ ಹೊಸ ಪರಿಸ್ಥಿತಿಯನ್ನು ಭಾರತೀಯ ಸೇನೆ ಒಪ್ಪಿಕೊಳ್ಳಬೇಕು ಎಂದು ಪಿಎಲ್‌ಎ ಬಯಸಿದೆ ಮತ್ತು ಪ್ಯಾಂಗೊಂಗ್ ತ್ಸೊದಲ್ಲಿ ಫಿಂಗರ್ ೪ರಿಂದ ೮ರಲ್ಲಿ ತಾನು ಹಿಂದಕ್ಕೆ ಸಾಗುವ ಮುನ್ನ ಇದು ಆಗಬೇಕು ಎಂದು ಹೇಳಿದೆ.

ತನ್ನ ನೆಲ ಬಿಟ್ಟು ಕೊಡದೇ ಇರಲು ನವದೆಹಲಿಯು ದೃಢ ನಿಶ್ಚಯ ಮಾಡಿರುವುದನ್ನು ಪಿಎಲ್‌ಎ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದನ್ನು ಚೀನಾದ ಪ್ರಸ್ತಾಪ ಸೂಚಿಸಿದೆ. ಎತ್ತರದ ಪ್ರದೇಶಗಳಲ್ಲಿ ಪಿಎಲ್‌ಎಯನ್ನು ಇರಿಸಬೇಕು ಮತ್ತು ಅಕ್ಸಾಯ್ ಚಿನ್ ಪ್ರದೇಶದಲ್ಲಿ ಇನ್ನಷ್ಟು ಆಳಕ್ಕೆ ತಳ ಊರಬೇಕು ಎಂಬ ಸ್ಪಷ್ಟ ಪ್ರಯತ್ನ ಚೀನದ್ದು ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಸೇನಾ ಅಧಿಕಾರಿ ಹೇಳಿದರು.

No comments:

Advertisement