ಮೇಲ್ಮನವಿ ವಿಳಂಬಿಸುವ ಅಧಿಕಾರಿಗಳಿಂದಲೇ ನಷ್ಟ ವಸೂಲಿ:ಸುಪ್ರೀಂಕೋರ್ಟ್
ನವದೆಹಲಿ: ಮೇಲ್ಮನವಿ ಸಲ್ಲಿಸಲು ಅತಿಯಾಗಿ ವಿಳಂಬ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಇದರಿಂದಾಗಿ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಿದ್ದು, ಈ ನಷ್ಟವನ್ನು ಸಂಬಂಧಿತ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎಂದು ನಿರ್ದೇಶಿಸಿದೆ.
‘ಮೇಲ್ಮನವಿ ಸಲ್ಲಿಸಲು ಶಾಸನ ನಿಗದಿಪಡಿಸಿದ ಕಾಲ ಮಿತಿಯನ್ನು
ಸರ್ಕಾರಿ ಅಧಿಕಾರಿಗಳು ನಿರ್ಲಕ್ಷಿಸಲು ನ್ಯಾಯಾಲಯ ಅವಕಾಶ ನೀಡುವುದಿಲ್ಲ‘ ಎಂದು ನ್ಯಾಯಮೂರ್ತಿ ಎಸ್.ಕೆ.ಕೌಲ್
ಮತ್ತು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರನ್ನು ಒಳಗೊಂಡ ಪೀಠವು ಹೇಳಿದೆ.
‘ಸರ್ಕಾರಿ ಆಡಳಿತ ಯಂತ್ರಗಳು ಸಕಾಲದಲ್ಲಿ ಮೇಲ್ಮನವಿಯನ್ನು
ಸಲ್ಲಿಸಲು ಅಸಮರ್ಥವಾಗಿದ್ದರೆ, ಮೇಲ್ಮನವಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡುವುದು
ಅಥವಾ ಕಾಲಾವಕಾಶ ಕೇಳುವುದು ಪರಿಹಾರವಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಎತ್ತಲಾಗಿದೆ‘ ಎಂದು
ಪೀಠ ಹೇಳಿತು.
ಮಧ್ಯಪ್ರದೇಶ
ಸರ್ಕಾರ ೬೬೩ ದಿನಗಳ ನಂತರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸುವ ವೇಳೆ ನ್ಯಾಯಪೀಠ ‘ಕಾನೂನಿನ
ಪ್ರಕಾರ ನಿಗದಿಪಡಿಸಿರುವ ಸಮಯದೊಳಗೆ ಮೇಲ್ಮನವಿಗಳನ್ನು ಸಲ್ಲಿಸಬೇಕು‘ ಎಂದು ಹೇಳಿತು.
No comments:
Post a Comment