ಫೇಸ್‌ಬುಕ್: ಅಂಕಿ ದಾಸ್ ರಾಜೀನಾಮೆ
ನವದೆಹಲಿ: ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಫೇಸ್ಬುಕ್ ಇಂಕ್ನ ಸಾರ್ವಜನಿಕ ನೀತಿ ನಿರ್ದೇಶಕರಾದ ಅಂಕಿ ದಾಸ್ ಅವರು ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ ವಹಿಸುವ ಸಲುವಾಗಿ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಕಂಪೆನಿ 2020 ಅಕ್ಟೋಬರ್ 27ರ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿತು.
ತನ್ನ ಅತಿದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ ರಾಜಕೀಯ ವಿಷಯವನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎಂಬ ಬಗ್ಗೆ ಫೇಸ್ಬುಕ್ ಮತ್ತು ದಾಸ್ ಅವರು ನೌಕರರಿಂದ ಆಂತರಿಕವಾಗಿ ಪ್ರಶ್ನೆಗಳನ್ನು ಎದುರಿಸಿದ ಕೆಲವು ವಾರಗಳ ಅಂಕಿದಾಸ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
"ಸಾರ್ವಜನಿಕ ಸೇವೆಯಲ್ಲಿನ ಆಸಕ್ತಿಯನ್ನು ಮುಂದುವರೆಸಲು, ಫೇಸ್ಬುಕ್ನಲ್ಲಿನ ತನ್ನ ಹುದ್ದೆಯಿಂದ ಕೆಳಗಿಳಿಯಲು ಅಂಕಿದಾಸ್ ನಿರ್ಧರಿಸಿದ್ದಾರೆ. ಅಂಕಿದಾಸ್ ನಮ್ಮ ಭಾರತದ ಆರಂಭಿಕ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರು ಮತ್ತು ಕಳೆದ ೯ ವರ್ಷಗಳಲ್ಲಿ ಕಂಪೆನಿಯ ಮತ್ತು ಅದರ ಸೇವೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಫೇಸ್ಬುಕ್ನ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಇ-ಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
No comments:
Post a Comment