ಇನ್ನೂ ಠಳಾಯಿಸುತ್ತಿದೆ ಕೊರೋನಾವೈರಸ್
ಹಬ್ಬದ ವೇಳೆ ಎಚ್ಚರಿಕೆ ಇರಲಿ: ಪ್ರಧಾನಿ ಮೋದಿ ಕರೆ
ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಮುಗಿದಿದ್ದರೂ, ಕೊರೋನಾವೈರಸ್ ಇನ್ನೂ ಠಳಾಯಿಸುತ್ತಿದೆ. ಹಬ್ಬದ ಋತುಮಾನ ಪ್ರಾರಂಭವಾಗುತ್ತಿದ್ದು ಜನರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ 2020 ಅಕ್ಟೋಬರ್ 20ರ ಮಂಗಳವಾರ ಸಂಜೆ ಕಿವಿಮಾತು ಹೇಳಿದರು.
"ಈ ಹಬ್ಬದ, ಋತುವಿನಲ್ಲಿ, ಮಾರುಕಟ್ಟೆಗಳು ಮತ್ತೆ ಪ್ರಕಾಶಮಾನವಾಗಿವೆ, ಆದರೆ ರಾಷ್ಟ್ರವ್ಯಾಪಿ ದಿಗ್ಬಂಧನ ಮುಗಿದ್ದರೂ ಕೋವಿಡ್-೧೯ ಇನ್ನೂ ಠಳಾಯಿಸುತ್ತಲೇ ಇದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು’
ಎಂದು ದೇಶದ ಜನತೆಯನ್ನು ಉದ್ದೇಶಿಸಿ ಮಾಡಿದ ರಾಷ್ಟ್ರವ್ಯಾಪಿ ಭಾಷಣದಲ್ಲಿ ಪ್ರಧಾನಿ ನುಡಿದರು.
’ಕಳೆದ ೭-೮ ತಿಂಗಳುಗಳಲ್ಲಿ ಪ್ರತಿಯೊಬ್ಬ ಭಾರತೀಯರ ಪ್ರಯತ್ನದಿಂದ, ಭಾರತವು ಸ್ಥಿರ ಪರಿಸ್ಥಿತಿಯಲ್ಲಿದೆ, ನಾವು ಅದನ್ನು ಹದಗೆಡಿಸಲು ಬಿಡಬಾರದು’ ಎಂದು ಅವರು ಹೇಳಿದರು.
ಸರಣಿ ಹಬ್ಬಗಳ ಋತುಮಾನವು ಪ್ರಾರಂಭವಾಗುತ್ತಿದ್ದಂತೆ ನಾಗರಿಕರು ಎಚ್ಚರಿಕೆ ಮತ್ತು ಸಂಯಮವನ್ನು ಅಭ್ಯಾಸ ಮಾಡಬೇಕು ಎಂದ ಪ್ರಧಾನಿ ಆಗ್ರಹಿಸಿದರು.
"ಇತ್ತೀಚೆಗೆ, ನಾವು ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿದ್ದೇವೆ, ಅವುಗಳಲ್ಲಿ ಜನರು ಜಾಗರೂಕರಾಗಿ ಇಲ್ಲದೇ ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇದು ಸರಿಯಲ್ಲ. ಮುಖಹೊದಿಕೆ ಇಲ್ಲದೆ ಹೆಜ್ಜೆ ಹಾಕಿದರೆ, ನೀವು ನಿಮ್ಮ ಕುಟುಂಬಗಳನ್ನು ಅಪಾಯಕ್ಕೆ ದೂಡುತ್ತೀರಿ. ಅಮೆರಿಕ ಅಥವಾ ಯುರೋಪಿನಲ್ಲಿ ಪ್ರಕರಣಗಳು ಕಡಿಮೆಯಾದವು ಎನ್ನುತ್ತಿದ್ದಂತೆಯೇ ಬಳಿಕ ದಿಢೀರ್ ಕಂಡುಬಂದಿದೆ’ ಎಂದು ಪ್ರಧಾನಿ ನುಡಿದರು.
"ಕಳೆದ ೭-೮ ತಿಂಗಳುಗಳಲ್ಲಿ ಪ್ರತಿಯೊಬ್ಬ ಭಾರತೀಯರ ಪ್ರಯತ್ನದಿಂದ, ಭಾರತವು ಸ್ಥಿರ ಪರಿಸ್ಥಿತಿಯಲ್ಲಿದೆ, ನಾವು ಅದನ್ನು ಹದಗೆಡಿಸಲು ಬಿಡಬಾರದು. ಯಾವುದೇ ರೀತಿಯ ಬೇಜವಾಬ್ದಾರಿಯು ಪ್ರಾಣಕ್ಕೇ ಕುತ್ತು ಉಂಟು ಮಾಡುತ್ತದೆ’ ಎಂದು ಅವರು ಹೇಳಿದರು.
"ಭಾರತವು ಕೋವಿಡ್- ೧೯ ರೋಗಿಗಳಿಗಾಗಿ ೯೦ ಲಕ್ಷಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿದೆ. ೧೨,೦೦೦ ಸಂಪರ್ಕತಡೆಯನ್ನು ಹೊಂದಿದೆ, ಸುಮಾರು ೨,೦೦೦ ಕೊರೋನಾ ಪರೀಕ್ಷಾ ಪ್ರಯೋಗಾಲಯಗಳಿವೆ. ಪರೀಕ್ಷೆಗಳ ಸಂಖ್ಯೆ ಶೀಘ್ರದಲ್ಲೇ ೧೦ ಕೋಟಿ ದಾಟಲಿದೆ. ಕೋವಿಡ್ ವಿರುದ್ಧದ ನಮ್ಮ ಹೋರಾಟದಲ್ಲಿ, ಪರೀಕ್ಷೆಗಳ ಸಂಖ್ಯೆಯಲ್ಲಿನ ಏರಿಕೆಯೇ ನಮ್ಮ ಶಕ್ತಿ’ ಎಂದು ಪ್ರಧಾನಿ ನುಡಿದರು.
"ಕೋವಿಡ್ -೧೯ ಲಸಿಕೆ ತಯಾರಿಸಲು ಎಲ್ಲ ದೇಶಗಳು ಸಮರೋಪಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಲಸಿಕೆ ಲಭ್ಯವಾದ ಕೂಡಲೇ ಪ್ರತಿಯೊಬ್ಬ ಭಾರತೀಯರಿಗೂ ಒದಗಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
"ಹಬ್ಬಗಳು ಸಂತೋಷ ಮತ್ತು ಆಚರಣೆಯ ಸಮಯ, ನಾವು ಕಠಿಣ ಸಮಯದಿಂದ ಹೊರಬರುತ್ತಿದ್ದೇವೆ. ಈ ಸಮಯದಲ್ಲಿನ ಅಸಡ್ಡೆ ನಮ್ಮ ಹೋರಾಟವನ್ನು ನಿಷ್ಪ್ರಯೋಜಕ ಗೊಳಿಸುತ್ತದೆ’ ಎಂದು ಪ್ರಧಾನಿ ನುಡಿದರು.
"ನಾವು ಲಸಿಕೆ ಪಡೆದಾಗ ಅದನ್ನು ಎಲ್ಲರಿಗೂ ತಲುಪಿಸುತ್ತೇವೆ ಮತ್ತು ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಲಸಿಕೆ ಬರುವವರೆಗೂ ಜನರು ಕೋವಿಡ್ ಶಿಷ್ಟಾಚಾರಗಳನ್ನು ಅನುಸರಿಸಬೇಕು’ ಎಂದು ಪ್ರಧಾನಿ ಒತ್ತಾಯಿಸಿದರು.
ನಾವು ವೈರಸ್ಸನ್ನು ಚೆನ್ನಾಗಿ ನಿಭಾಯಿಸಿದ್ದೇವೆ, ಆದರೆ ನಾವು ಇನ್ನೂ ಉತ್ತಮವಾದ ಕೆಲಸವನ್ನು ಮಾಡಬೇಕಾಗಿದೆ. ನಮ್ಮ ಚೇತರಿಕೆ ದರ ಉತ್ತಮವಾಗಿದೆ, ಮರಣ ಪ್ರಮಾಣ ಕಡಿಮೆ, ನಮ್ಮ ಕೊರೋನಾ ಪ್ರಕರಣಗಳ ಒಟ್ಟು ಸಂಖ್ಯೆ ಬ್ರೆಜಿಲ್ ಮತ್ತು ಅಮೆರಿಕಕ್ಕಿಂತ ಕಡಿಮೆಯಾಗಿದೆ, ಆದಾಗ್ಯೂ, ಇದು ಇನ್ನೂ ಅಸಡ್ಡೆ ಹೊಂದುವ ಸಮಯವಲ್ಲ ಎಂದು ಅವರು ಎಚ್ಚರಿಸಿದರು.
ಹಬ್ಬದ ಸಮಯದಲ್ಲಿನ ಅಜಾಗರೂಕತೆಯ ವಿರುದ್ಧ ಜನರನ್ನು ಪ್ರಧಾನಿ ಎಚ್ಚರಿಸಿದರು. ಹಬ್ಬದ ಕಾಲ ಸಮೀಪಿಸುತ್ತಿದ್ದಂತೆ ನಿಮ್ಮ ಕಾವಲುಗಾರರನ್ನು ನಿರಾಸೆ ಮಾಡಬೇಡಿ ಅವರು ಜನರಿಗೆ ಸೂಚಿಸಿದರು.
ಸಂಜೆ ೬ ಗಂಟೆಗೆ ಸರಿಯಾಗಿ ತಮ್ಮ ಭಾಷಣ ಆರಂಭಿಸಿದ ಪ್ರಧಾನಿ, ’ನಿಮ್ಮೆಲ್ಲರನ್ನೂ ಸುರಕ್ಷಿತವಾಗಿ ನೋಡಲು ನಾನು ಬಯಸುತ್ತೇನೆ’ ಎಂಬ ಮಾತುಗಳೊಂದಿಗೆ ತಮ್ಮ ಭಾಷಣವನ್ನು ಮುಗಿಸಿದರು ಮತ್ತು ಹಬ್ಬಗಳ ಸರಣಿ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದರು.
No comments:
Post a Comment