ಭಾರತ: ಲಕ್ಷ ದಾಟಿದ ಕೊರೋನಾ ಸಾವು, ಚೇತರಿಕೆ ಅತ್ಯಧಿಕ
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸಾವಿನ ಸಂಖ್ಯೆ ೧ ಲಕ್ಷವನ್ನು ದಾಟಿದೆ. ಆದರೆ ಚೇತರಿಕೆ ಪ್ರಮಾಣ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು 2020 ಅಕ್ಟೋಬರ್ 03ರ ಶನಿವಾರ ತಿಳಿಸಿದವು.
ಭಾರತವು ಶೇಕಡಾ ೧೮.೬ರಷ್ಟು ಜಾಗತಿಕ ಕೊರೋನವೈರಸ್ ಪ್ರಕರಣಗಳನ್ನು ಹೊಂದಿದೆ. ಆದರೆ ವಿಶ್ವದ ಚೇತರಿಕೆ ಪ್ರಮಾಣದಲ್ಲಿ ಶೇಕಡಾ ೨೧ರಷ್ಟು ಪಾಲು ಭಾರತದ್ದು ಎಂದು ಅದು ಹೇಳಿದೆ.
ಜಾಗತಿಕವಾಗಿ ಕೊರೊನಾವೈರಸ್ ಕಾಯಿಲೆಯ (ಕೋವಿಡ್ -೧೯) ಎರಡನೇ ಅತಿಹೆಚ್ಚು ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. ಕೋವಿಡ್-೧೯ರಿಂದ ಅತಿಯಾಗಿ ಬಾಧಿಸಿರುವ ರಾಷ್ಟ್ರಗಳ ಪೈಕಿ ಭಾರತವು ಅಮೆರಿಕದ ಬಳಿಕ ಎರಡನೇ ಸ್ಥಾನದಲ್ಲಿದೆ. ಆದರೆ, ಭಾರತವು ಸೋಂಕಿನಿಂದ ಹೆಚ್ಚಿನ ಸಂಖ್ಯೆಯ ಚೇತರಿಕೆಗಳನ್ನು ದಾಖಲಿಸುತ್ತಿದೆ.
ವಿಶ್ವಾದ್ಯಂತ ವರದಿಯಾದ ಎಲ್ಲಾ ಚೇತರಿಕೆಯ ಪ್ರಮಾಣದ ಶೇಕಡಾ ೨೧ರಷ್ಟು ಪಾಲು ಭಾರತದ್ದಾಗಿದೆ. ವಿಶ್ವದ ಒಟ್ಟು ಸೋಂಕು ಪ್ರಕರಣಗಳ ಶೇಕಡಾ ೧೮.೬ ಪ್ರಕರಣಗಳು ಭಾರತದಲ್ಲಿವೆ.
ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ ಮಾಹಿತಿಯ ಪ್ರಕಾರ, ಅಮೆರಿಕ ಜಾಗತಿಕವಾಗಿ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ, ಜಾಗತಿಕ ಪ್ರಕರಣಗಳಲ್ಲಿ ಅಮೆರಿಕದ ಪಾಲು ಶೇಕಡಾ ೨೧.೭ರಷ್ಟು ಇದೆ. ಆದರೆ ಚೇತರಿಕೆಯ ಪ್ರಮಾಣ ಒಟ್ಟು ಜಾಗತಿಕ ಚೇತರಿಕೆಯ ಶೇಕಡಾ ೧೮.೪ರಷ್ಟಿದೆ.
ಭಾರತದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಾಗಿರುವುದರಿಂದ ಸೋಂಕಿನಿಂದಾಗಿ ಸಂಭವಿಸುವ ಸಾವುಗಳ ಪ್ರಮಾಣ ಕಡಿಮೆಯಾಗಿದೆ.
ಭಾರತದ ಪ್ರಕರಣಗಳಲ್ಲಿ ಸೋಂಕಿಗೆ ತುತ್ತಾದವರು ಮತ್ತು ಅವರ ಪೈಕಿ ಸಾವಿಗೀಡಾದವರ ಅನುಪಾತ ಅಂದರೆ ಪ್ರಕರಣ ಸಾವಿನ ಅನುಪಾತ (ಸಿಎಫ್‌ಆರ್) ವಿಶ್ವದಲ್ಲೇ ಅತ್ಯಂತ ಕಡಿಮೆ ಮತ್ತು ಪ್ರಸ್ತುತ ಶೇಕಡಾ ೧.೫೬ರಷ್ಟಿದೆ, ಇದು ಜಾಗತಿಕ ಸರಾಸರಿ ಶೇಕಡಾ ೨.೯೭ಕ್ಕಿಂತ ಕಡಿಮೆಯಾಗಿದೆ.
ಭಾರತದ ಸಿಎಫ್ ಆರ್ ಶೇಕಡಾ ೧೦.೯ ಇರುವ ಮೆಕ್ಸಿಕೋ, ಶೇಕಡಾ ೯.೧೭ ಇರುವ ಇಂಗ್ಲೆಂಡಿಗಿಂತ ಅತ್ಯಂತ ಕಡಿಮೆ ಇದೆ. ಜಾಗತಿಕ ಸರಾಸರಿಗಿಂತ ಸಿಎಫ್‌ಆರ್ ಕಡಿಮೆ ಇರುವ ಇತರ ದೇಶಗಳು ಶೇ.೧.೭೬ ರಷ್ಟಿರುವ ರಷ್ಯಾ, ಶೇಕಡಾ ೨.೪೯ ಇರುವ ದಕ್ಷಿಣ ಆಫ್ರಿಕಾ ಮತ್ತು ಶೇಕಡಾ ೨.೮೭ರಷ್ಟು ಇರುವ ಅಮೆರಿಕ ಎಂದು ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.
"ಭಾರತವು ವಿಶ್ವದಾದ್ಯಂತ ಅತ್ಯಂತ ಕಡಿಮೆ ಸಿಎಫ್‌ಆರ್ ಅನ್ನು ವರದಿ ಮಾಡುತ್ತಿದೆ. ಏಕೆ ಎಂದು ಕಂಡುಹಿಡಿಯಲು ಅಧ್ಯಯನಗಳು ನಡೆಯುತ್ತಿವೆ, ಆದರೆ ವಿಜ್ಞಾನಿಗಳು ಇದು ಕಿರಿಯರ (ಯುವಕರ) ಕಾರಣದಿಂದಾಗಿರಬಹುದು, ಇತರ ಕೊರೋನವೈರಸ್ ಸೋಂಕುಗಳಿಗೆ ನಮ್ಮ ಹಿಂದಿನ ಅನಾವರಣವು ಹೆಚ್ಚು ವೈರಸ್ ಸೋಂಕು ಹೆಚ್ಚಾದರೂ ಕಡಿಮೆ ಸಾವಿಗೆ ಕಾರಣವಾಗಿರಬಹುದು. ಜನರು ಬಿಸಿಜಿ ಲಸಿಕೆ ಹಾಕಿಸಿಕೊಂಡಿರುವುದೂ ಇದಕ್ಕೆ ಕಾರಣವಾಗಿರಬಹುದು. ಚಿಕಿತ್ಸೆಯ ವಿಧಾನಗಳನ್ನು ಈಗ ಪ್ರಮಾಣೀಕರಿಸಿರುವುದ ಕೂಡಾ ಸಾವುಗಳಲ್ಲಿನ ಪ್ರಸ್ತುತ ಕುಸಿತಕ್ಕೆ ಕಾರಣವಾಗಿರಬಹುದು’ ಎಂದು ಸಫ್ದರ್ ಜಂಗ್ ಆಸ್ಪತ್ರೆಯ ಡಾ. ನೀರಜ್ ಗುಪ್ತಾ ಹೇಳಿದರು.
ದೇಶಾದ್ಯಂತ ಹೆಚ್ಚಿನ ಚೇತರಿಕೆ ಮತ್ತು ಕಡಿಮೆ ಹೊಸ ಪ್ರಕರಣಗಳು ವರದಿಯಾಗುತ್ತಿವೆ, ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಅಥವಾ ಪ್ರಸ್ತುತ ಸೋಂಕು ಇರುವವರ ಸಂಖ್ಯೆ ಕಡಿಮೆಯಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ ೧೨ ದಿನಗಳಿಂದ ಸತತವಾಗಿ ಕಡಿಮೆಯಾಗಿದೆ.
ದೇದಲ್ಲಿ ಪ್ರತಿದಿನ ಸುಮಾರು ೧,೦೦,೦೦೦ ಪ್ರಕರಣಗಳು ವರದಿಯಾಗಲು ಆರಂಭವಾದ ನಂತರ, ಶುಕ್ರವಾರದ ವೇಳೆಗೆ ಹೊಸ ಪ್ರಕರಣಗಳ ಸಂಖ್ಯೆ ೭೯,೦೦೦ ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಹೊಸ ಪ್ರಕರಣಗಳಲ್ಲಿ ಶೇ. ೭೮ಕ್ಕೂ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರ, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ದೆಹಲಿ, ಛತ್ತೀಸ್ ಗಢ ಈ ೧೦ ರಾಜ್ಯಗಳಿಂದ ವರದಿಯಾಗುತ್ತಿವೆ.
ಶುಕ್ರವಾರ ವರದಿಯಾದ ಒಟ್ಟು ಸಾವುಗಳಲ್ಲಿ, ಶೇಕಡಾ ೮೪ರಷ್ಟು ಹತ್ತು ರಾಜ್ಯಗಳಿಂದ ಬಂದಿವೆ - ಹೆಚ್ಚಿನ ಪ್ರಕರಣಗಳು ವರದಿಯಾಗಿರುವ ಕೇರಳ ಮತ್ತು ಒಡಿಶಾ ಹತ್ತು ರಾಜ್ಯಗಳಲ್ಲಿ ಹೆಚ್ಚಿನ ಸಾವು ಸಂಭವಿಸಿಲ್ಲ, ಆದರೆ ಮಧ್ಯಪ್ರದೇಶ ಮತ್ತು ಹರಿಯಾಣವು ಅತಿ ಹೆಚ್ಚು ಇರುವ ಹತ್ತು ರಾಜ್ಯಗಳಲ್ಲಿಲ್ಲ.
ಮಹಾರಾಷ್ಟ್ರವು ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳನ್ನು ವರದಿ ಮಾಡುತ್ತಲೇ ಇದೆ, ಎಲ್ಲಾ ಹೊಸ ಪ್ರಕರಣಗಳಲ್ಲಿ ಶೇಕಡಾ ೨೫ ಮತ್ತು ಸಾವುಗಳಲ್ಲಿ ಶೇಕಡಾ ೩೯.೬ರಷ್ಟಿದೆ ಎಂದು ಮಾಹಿತಿ ತೋರಿಸಿದೆ.
No comments:
Post a Comment