ಅಹ್ಮದ್ ಪಟೇಲ್ಗೆ ಕೊರೋನಾ, ಸೋಂಕು ೬೩ ಲಕ್ಷಕ್ಕೆ ಏರಿಕೆ, ೫೩ ಲಕ್ಷ ಗುಣಮುಖ
ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರಿಗೆ ಕೊರೋನಾ ಸೋಂಕು ತಗುಲಿದ್ದು, 2020 ಅಕ್ಟೋಬರ್ 01ರ ಗುರುವಾರ ಅವರು ತಮ್ಮ ನವದೆಹಲಿ ನಿವಾಸದಲ್ಲಿ ಸ್ವಯಂ ಪ್ರತ್ಯೇಕತೆ ಆರಂಭಿಸಿದರು.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದ್ದಿ ಪ್ರಕಟಿಸಿದ ಪಟೇಲ್, ಇತ್ತೀಚೆಗೆ ತನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸ್ವಯಂ-ಪ್ರತ್ಯೇಕಿಸಲು ಒತ್ತಾಯಿಸಿದರು.
’ನನಗೆ ಕೋವಿಡ್-೧೯ ಪಾಸಿಟಿವ್ ವರದಿ ಬಂದಿದೆ. ಇತ್ತೀಚೆಗೆ ನನ್ನೊಂದಿಗೆ ನಿಕಟ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸ್ವಯಂ ಪ್ರತ್ಯೇಕವಾಸ ಮಾಡಲು ನಾನು ವಿನಂತಿಸುತ್ತೇ’ ಎಂದು ಅವರು ಟ್ವೀಟ್ ಮಾಡಿದರು.
ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಮತ್ತು ತರುಣ್ ಗೊಗೊಯ್, ರಾಜ್ಯಸಭೆಯ ಉಪಸಭಾಪತಿ ಎಂ.ವೆಂಕಯ್ಯ ನಾಯ್ಡು, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ ಮತ್ತು ಪ್ರಹ್ಲಾದ್ ಪಟೇಲ್ ಅವರು ಕೋವಿಡ್ -೧೯ ಸೋಂಕು ತಗುಲಿದ ಇತರ ನಾಯಕರು.
ಏತನ್ಮಧ್ಯೆ, ಭಾರತವು ಗುರುವಾರ ೮೬,೮೨೧ ಹೊಸ ಕೊರೋನವೈರಸ್ ಪ್ರಕರಣಗಳನ್ನು ದಾಖಲಿಸಿದೆ.ಇದರೊಂದಿಗೆ ಭಾರತದ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ ೬೩,೧೨,೫೮೪ ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ಬೆಳಿಗ್ಗೆ ೮ ಗಂಟೆಗೆ ತಿಳಿಸಿತು.
ಕಳೆದ ೨೪ ಗಂಟೆಗಳಲ್ಲಿ ವೈರಸ್‌ನಿಂದಾಗಿ ೧,೧೮೧ ಹೊಸ ಸಾವುಗಳು ಸಂಭವಿಸಿವೆ. ಒಟ್ಟು ಸಾವಿನ ಸಂಖ್ಯೆ ೯೮,೬೭೮ ಕ್ಕೆ ತಲುಪಿದೆ.
ದೇಶದಲ್ಲಿ ೯,೪೦,೭೦೫ ಸಕ್ರಿಯ ಪ್ರಕರಣಗಳಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ಒಟ್ಟು ಸಂಖ್ಯೆಯ ಶೇಕಡಾ ೧೪.೯೦ರಷ್ಟಿದೆ. ಈವರೆಗೆ ಒಟ್ಟು ೫೨,೭೩,೨೦೧ ಜನರು ಈ ಕಾಯಿಲೆಯಿಂದ ಗುಣಮುಖರಾಗಿದ್ದು, ದೇಶದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ ೮೩.೫೩ ಕ್ಕೆ ಏರಿದೆ.
ಕೊರೊನಾವೈರಸ್ ಸೋಂಕಿನಿಂದಾಗಿ ಸಂಭವಿಸುತ್ತಿರುವ ಸಾವಿನ ಪ್ರಮಾಣವು ಶೇಕಡಾ ೧.೫೬ ಕ್ಕೆ ಇಳಿದಿದೆ.
ಭಾರತದ ಕೋವಿಡ್-೧೯ ಪ್ರಕರಣಗಳ ಒಟ್ಟು ಸಂಖ್ಯೆಯು ಆಗಸ್ಟ್ ೭ ರಂದು ೨೦ ಲಕ್ಷ, ಆಗಸ್ಟ್ ೨೩ ರಂದು ೩೦ ಲಕ್ಷ ಮತ್ತು ಸೆಪ್ಟೆಂಬರ್ ೫ ರಂದು ೪೦ ಲಕ್ಷ ದಾಟಿದೆ. ಇದು ಸೆಪ್ಟೆಂಬರ್ ೧೬ ರಂದು ೫೦ ಲಕ್ಷ ದಾಟಿದೆ ಮತ್ತು ಸೆಪ್ಟೆಂಬರ್ ೨೮ ರಂದು ೬೦ ಲಕ್ಷ ದಾಟಿದೆ.
ಐಸಿಎಂಆರ್ ಪ್ರಕಾರ, ಸೆಪ್ಟೆಂಬರ್ ೩೦ ರವರೆಗೆ ಒಟ್ಟು ೭,೫೬,೧೯,೭೮೧ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಬುಧವಾರ ೧೪,೨೩,೦೫೨ ಮಾದರಿಗಳನ್ನು ಪರೀಕ್ಷಿಸಲಾಗಿದೆ.
೧,೧೮೧ ಹೊಸ ಸಾವುನೋವುಗಳಲ್ಲಿ ಮಹಾರಾಷ್ಟ್ರದಿಂದ ೪೮೧, ಕರ್ನಾಟಕದಿಂದ ೮೭, ಉತ್ತರಪ್ರದೇಶದಿಂದ ೬೯, ತಮಿಳುನಾಡಿನಿಂದ ೬೭, ಪಶ್ಚಿಮ ಬಂಗಾಳದಿಂದ ೫೯, ಆಂಧ್ರಪ್ರದೇಶದಿಂದ ೪೮, ಪಂಜಾಬ್ನಿಂದ ೪೭,ಛತ್ತೀಸ್ ಗಢ ಮತ್ತು ದೆಹಲಿಯಿಂದ ತಲಾ ೪೧ ಮತ್ತು ಮಧ್ಯಪ್ರದೇಶದಿಂದ ೩೫ ಸೇರಿವೆ.
ದೇಶದಲ್ಲಿ ಈವರೆಗೆ ದಾಖಲಾಗಿರುವ ಒಟ್ಟು ೯೮,೬೭೮ ಸಾವುಗಳ ಪೈಕಿ ಮಹಾರಾಷ್ಟ್ರದಿಂದ ೩೬,೬೬೨, ತಮಿಳುನಾಡಿನಿಂದ ೯,೫೨೦, ಕರ್ನಾಟಕದಿಂದ ೮,೮೬೪, ಆಂಧ್ರಪ್ರದೇಶದಿಂದ ೫,೮೨೮, ಉತ್ತರಪ್ರದೇಶದಿಂದ ೫,೭೮೪, ದೆಹಲಿಯಿಂದ ೫,೩೬೧, ಪಶ್ಚಿಮ ಬಂಗಾಳದಿಂದ ೪,೯೫೮ , ಪಂಜಾಬ್‌ನಿಂದ ೩,೪೦೬ ಮತ್ತು ಮಧ್ಯಪ್ರದೇಶದಿಂದ ೨,೩೧೬ ವರದಿಯಾಗಿವೆ.
ಶೇಕಡಾ ೭೦ ರಷ್ಟು ಸಾವುಗಳು ಸಹ ಆರೋಗ್ಯ ಸಮಸ್ಯೆಗಳಿಂದಾಗಿ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ಒತ್ತಿಹೇಳಿತು.
No comments:
Post a Comment