ಬಿಜೆಪಿ ನಾಯಕಿಗೆ ’ಐಟಂ’ ಪದ ಬಳಕೆ: ಕಮಲನಾಥ್ ಗೆ ನೋಟಿಸ್
ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ, ಸಚಿವೆ ಇಮಾರ್ತಿ ದೇವಿ ವಿರುದ್ಧದ ‘ಐಟಂ’ ಟೀಕೆಗಾಗಿ ಚುನಾವಣಾ ಆಯೋಗವು 2020 ಅಕ್ಟೋಬರ್ 21ರ ಬುಧವಾರ ಕಾಂಗ್ರೆಸ್ ಮುಖಂಡ ಕಮಲನಾಥ್ ಅವರಿಗೆ ನೋಟಿಸ್ ಜಾರಿ ಮಾಡಿತು.
ಮುಂದಿನ ೪೮ ಗಂಟೆಗಳಲ್ಲಿ ತಮ್ಮ ಉತ್ತರ ನೀಡುವಂತೆ ಆಯೋಗವು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗೆ ಸೂಚಿಸಿತು.
ಮಧ್ಯಪ್ರದೇಶದ ಉಪಚುನಾವಣೆಗಳಿಂದಾಗಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ, ಯಾವುದೇ ಪಕ್ಷವು ಅಸ್ತಿತ್ವದಲ್ಲಿರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವ, ಪರಸ್ಪರ ದ್ವೇಷ ಮೂಡಿಸುವ ಅಥವಾ ವಿವಿಧ ಜಾತಿಗಳು ಹಾಗೂ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟು ಮಾಡುವ ಯಾವುದೇ ಹೇಳಿಕೆ ನೀಡಬಾರದು ಎಂದು ಹೇಳುತ್ತದೆ ಎಂದು ಕಮಲನಾಥ್ ಅವರಿಗೆ ಕಳುಹಿಸಿದ ನೋಟಿಸಿನಲ್ಲಿ ಅವರ ಟೀಕೆಗೆ ಆಕ್ಷೇಪ ಸೂಚಿಸಿದ ಚುನಾವಣಾ ಆಯೋಗ ತಿಳಿಸಿದೆ.
ಬಿಜೆಪಿಯ ಇಮಾರ್ತಿ ದೇವಿ ಅವರನ್ನು ಕಣಕ್ಕಿಳಿಸಿರುವ ಗ್ವಾಲಿಯರ್‌ನ ದಬ್ರಾ ಪಟ್ಟಣದಲ್ಲಿ ನವೆಂಬರ್ ೩ ರ ಉಪಚುನಾವಣೆಗೆ ಭಾನುವಾರ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲನಾಥ್, ಕಾಂಗ್ರೆಸ್ ಅಭ್ಯರ್ಥಿ ’ಸರಳ ವ್ಯಕ್ತಿ’ ಎದುರಾಳಿ ’ಐಟಂ’ನಂತೆ ಅಲ್ಲ’ ಎಂದು ಹೇಳಿದ್ದರು.
ಈ ಹೇಳಿಕೆಗಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವzಲ್ಲಿ ಬಿಜೆಪಿ ಕಮಲ್ ನಾಥ್ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.
ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಮಲನಾಥ್ ಅವರ ಹೇಳಿಕೆಯನ್ನು ಮಂಗಳವಾರ ನಿರಾಕರಿಸಿದ್ದರು, ಇದು ‘ದುರದೃಷ್ಟಕರ’ ಎಂದು ಹೇಳಿದ್ದರು.
ರಾಷ್ಟ್ರೀಯ ಮಹಿಳಾ ಆಯೋಗವು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯವರ ಹೇಳಿಕೆಗೆ ವಿವರಣೆಯನ್ನು ಕೇಳಿದೆ.
ಚೌಹಾಣ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬgದು, ಕಮಲನಾಥ್ ಅವರ ಟೀಕೆಗಳನ್ನು ಖಂಡಿಸಿ, ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಕಿತ್ತು ಹಾಕುವಂತೆ ಆಗ್ರಹಿಸಿದ್ದಾರೆ.
ಕಮಲ್ ನಾಥ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಅಗೌರಯುತವಾಗಿ ಏನನ್ನೂ ಹೇಳಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.
No comments:
Post a Comment