Wednesday, October 7, 2020

ಚೌತಾಲದ್ವಯರ ಮನೆಗಳ ಮುಂದೆ ಪ್ರತಿಭಟನೆ

 ಚೌತಾಲದ್ವಯರ ಮನೆಗಳ ಮುಂದೆ ಪ್ರತಿಭಟನೆ

ಸಿರ್ಸಾ (ಹರಿಯಾಣ): ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಉಪಮುಖ್ಯಮಂತ್ರಿ ದುಶ್ಯಂತ ಚೌತಾಲ ಮತ್ತು ಸೆರೆಮನೆ ಖಾತೆ ಸಚಿವ ರಂಜಿತ್ ಚೌತಾಲ ಅವರ ಮನೆಗಳ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತ ಯೋಗೇಂದ್ರ ಯಾದವ್ ಮತ್ತು ಇತರ ಹಲವಾರು ರೈತರನ್ನು ಪೊಲೀಸರು 2020 ಅಕ್ಟೋಬರ್ 07 ಬುಧವಾರ ಬಂಧಿಸಿದರು.

ಕೋವಿಡ್ -೧೯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಸಿವಿಲ್ ಲೈನ್ಸ್ ಪೊಲೀಸರು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಮತ್ತು ಸುಮಾರು ೧೦೦ ರೈತರನ್ನು ವಶಕ್ಕೆ ತೆಗೆದುಕೊಂಡರು.

ಮಂಗಳವಾರ ರಾತ್ರಿಯಿಂದ ಅವರು ಭೂಮನ್ ಶಾ ಚೌಕದಲ್ಲಿ ಅನಿರ್ದಿಷ್ಟ ಮುಷ್ಕg ಆರಂಭಿಸಿದ್ದರು.

ದುಶ್ಯಂತ್ ಮತ್ತು ಅವರ ಮೊಮ್ಮಗ ರಂಜಿತ್ ಚೌತಾಲ ಅವರು ಮನೋಹರ ಲಾಲ್ ಖಟ್ಟರ್ ಸರ್ಕಾರಕ್ಕೆ ರಾಜೀನಾಮೆ ನೀಡುವವರೆಗೂ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಯಾದವ್ ಹೇಳಿದರು.

ಹರಿಯಾಣದಲ್ಲಿ ನೀವು ರೈತರೊಂದಿಗೆ ಇರಲು ಬಯಸುತ್ತೀರೋ ಬಿಜೆಪಿ ಸರ್ಕಾರದೊಂದಿಗೆ ಇರಬಯಸುತ್ತೀರೋ ಎಂಬುದಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಯಾದವ್ ಚೌತಾಲದ್ವಯರನ್ನು ಒತ್ತಾಯಸಿದರು.

ಬಿಜೆಪಿಯನ್ನು ಆರಿಸಿಕೊಂಡರೆ ನೀವು ನಾಲ್ಕು ವರ್ಷಗಳ ಕಾಲ ಅಧಿಕಾರವನ್ನು ಆನಂದಿಸಬಹುದು, ಆದರೆ ಮುಂಬರುವ ಪೀಳಿಗೆಯ ರೈತರು ಡೆತ್ ವಾರಂಟ್ಗಳನ್ನು ಬೆಂಬಲಿಸಿದ್ದಕ್ಕಾಗಿ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಯೋಗೇಂದ್ರ ಯಾದವ್ ಹೇಳಿದರು.

ಕೇಂದ್ರವು ಅಂಗೀಕರಿಸಿದ ಕೃಷಿ ಮಸೂದೆಗಳನ್ನು ಉಲ್ಲೇಖಿಸಿದ ಅವರು ರೈತರ ದೊಡ್ಡ ಸಮೂಹದಿಂದ ವಿರೋಧ ವ್ಯಕ್ತವಾಗಿರುವ ಮೂರು ಕಾನೂನುಗಳನ್ನು ರೈತ ಸಮುದಾಯಕ್ಕೆಡೆತ್ ವಾರಂಟ್ ಎಂದು ಬಣ್ಣಿಸಿದರು.

ಬಂಧನದಿಂದ ಅಂಜದ ಹಲವಾರು ರೈತರು ಭೂಮಾನ್ ಶಾ ಚೌಕದಲ್ಲಿ ಪ್ರತಿಭಟನೆಯನ್ನು ಪುನರಾರಂಭಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿವೆ.

No comments:

Advertisement