ತೆಲಂಗಾಣದಲ್ಲಿ ಮಹಾಮಳೆಗೆ ೭೦ ಬಲಿ
ಹೈದರಾಬಾದ್: ತೆಲಂಗಾಣದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಲಿಯಾದವರ ಸಂಖ್ಯೆ 2020 ಅಕ್ಟೋಬರ್ 19ರ ಸೋಮವಾರ ೭೦ಕ್ಕೆ ಏರಿಕೆಯಾಯಿತು.
೧೯೦೮ರ ಬಳಿಕ ರಾಜ್ಯವು ಕಂಡ ಅತ್ಯಂತ ಭೀಕರ ಮಳೆಯಿಂದಾಗಿ ಹೈದರಾಬಾದ್ ಬಹುತೇಕ ಜಲಾವೃತವಾಗಿದ್ದು, ಮಳೆ ಸಂಬಂಧಿತ ದುರಂತಗಳಲ್ಲಿ ಹೈದರಾಬಾದ್ ನಗರ ಒಂದರಲ್ಲೇ ೩೩ ಮಂದಿ ಸಾವನ್ನಪ್ಪಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ೩೭ ಜನರು ಮೃತರಾಗಿದ್ದಾರೆ.
ಈ ಮಧ್ಯೆ, ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮತ್ತಷ್ಟು ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದು ಜನರು ಮತ್ತು ಸರ್ಕಾರದ ಆತಂಕವನ್ನು ಹೆಚ್ಚಿಸಿದೆ.
ಭೀಕರ ಮಳೆ ಹಾಗೂ ನೆರೆಯಿಂದ ನಲುಗಿರುವ ಮಹಾರಾಷ್ಟ್ರವು ಪರಿಹಾರ ಕಾರ್ಯಕ್ಕಾಗಿ ಸಾಲ ಮಾಡಲು ನಿರ್ಧರಿಸಿದೆ. ಮೈತ್ರಿ ಸರ್ಕಾರದ ಭಾಗವಾಗಿರುವ ಎನ್ಸಿಪಿ ವರಿಷ್ಠ ಶರದ್ ಪವಾರ್ ಸೋಮವಾರ ಈ ವಿಷಯ ತಿಳಿಸಿದರು.
No comments:
Post a Comment