ಹೈಡ್ರೋಜನ್-ಚಾಲಿತ ಟೊಯೋಟಾ ಮಿರೈ
ಮುಂದಿನ
ಅಧಿಕೃತ ‘ಪೋಪ್ ಮೊಬೈಲ್’
ಟೋಕಿಯೋ: ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಜಪಾನ್ (ಸಿಬಿಸಿಜೆ) ಮೂಲಕ ಪೋಪ್ ಫ್ರಾನ್ಸಿಸ್ ಅವರಿಗೆ ಓಡಾಟದ ಅಗತ್ಯಗಳ ಸಲುವಾಗಿ ವಿಶೇಷವಾಗಿ ಮಾರ್ಪಡಿಸಿದ ಹೈಡ್ರೋಜನ್-ಚಾಲಿತ ಟೊಯೋಟಾ ಮಿರೈಯನ್ನು ಉಡುಗೊರೆಯಾಗಿ ನೀಡಲಾಗಿದೆ. ಟೊಯೋಟಾ ಕಂಪೆನಿಯು ವಿಶೇಷವಾಗಿ ತಯಾರಿಸಿದ ಎರಡು ಮಿರೈ ವಾಹನಗಳಲ್ಲಿ ಈ ಕಾರು ಒಂದಾಗಿದೆ.
ಹೊಸ ಅಧಿಕೃತ ಪೋಪ್ ಮೊಬೈಲ್ ೫.೧ ಮೀಟರ್ ಉದ್ದ
ಮತ್ತು ೨.೭ ಮೀಟರ್
ಎತ್ತರವನ್ನು ಹೊಂದಿದೆ - ವಿಶೇಷವಾಗಿ ರಚಿಸಲಾದ ಮೇಲ್ಚಾವಣಿ ಇದಕ್ಕಿದೆ. ಕಾರಿನ
ಹಿಂಭಾಗದಲ್ಲಿ ಇರುವ ಬಿಳಿ ಬಣ್ಣದ ವಿಶಿಷ್ಟ ರಚನೆಯು ಪೋಪ್
ಅವರು ಕುಳಿತುಕೊಂಡಿದ್ದರೂ ಜನರಿಗೆ ಸುಲಭವಾಗಿ ಅವರು ಕಾಣುವಂತಹ ವಿನ್ಯಾಸವನ್ನು ಹೊಂದಿದೆ.
ಹೊಸ
ಪೋಪ್ ಮೊಬೈಲ್ ಹಿಂದಿನ
ಪೋಪ್ ಮೊಬೈಲುಗಳಲ್ಲಿ ಇದ್ದಂತಹ ಗುಂಡು
ನಿರೋಧಕ ಗಾಜಿನ ಗುಮ್ಮಟಕ್ಕೆ ವಿರುದ್ಧವಾಗಿ ತೆರೆದ ಗಾಳಿಯ ಗುಮ್ಮಟವನ್ನು ಹೊಂದಿದೆ. ಕಾರಿನ ಹಿಂಭಾಗದಲ್ಲಿ ಪೋಪ್ ಅವರಿಗಾಗಿ ಎತ್ತರದ ಆಸನವನ್ನು ವ್ಯವಸ್ಥೆ
ಮಾಡಲಾಗಿದೆ.
ಟೊಯೋಟಾ ಮಿರೈ ಇದೇ ಮೊದಲ ಬಾರಿಗೆ ಸಾಮೂಹಿಕವಾಗಿ ಉತ್ಪಾದನೆಯಾಗಿರುವ ಹೈಡ್ರೋಜನ್ ಚಾಲಿತ ಸೆಡಾನ್. ಇದನ್ನು ಮೊದಲ ಬಾರಿಗೆ ೨೦೧೪ ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು ಹೈಡ್ರೋಜನ್ ಇಂಧನ ಕೋಶ ವ್ಯವಸ್ಥೆಯಿಂದ ನಡೆಸಲ್ಪಡುವ ಅಂತಿಮ ಶೂನ್ಯ- ಮಾಲಿನ್ಯ ಕಾರಕ ಕಾರು. ಸುಮಾರು 500 ಕಿ.ಮೀ. ಸಂಚಾರ ಸಾಮರ್ಥ್ಯ ಇರುವ ಕಾರು ಕೇವಲ ನೀರನ್ನು ಹೊರಸೂಸುತ್ತಾ ಓಡುತ್ತದೆ.
ಜಪಾನಿನ ಭಾಷೆಯಲ್ಲಿ
‘ಮಿರೈ’ ಎಂದರೆ
‘ಭವಿಷ್ಯ’ಎಂದು ಅರ್ಥ.
ಕಾರು
ವಾಯುಬಲವೈಜ್ಞಾನಿಕ ಬಾಹ್ಯ ಶೈಲಿಯೊಂದಿಗೆ ಭವಿಷ್ಯದ
ವಿನ್ಯಾಸವನ್ನು ಹೊಂದಿದೆ.
ಅದರ ಹೈಡ್ರೋಜನ್ ಇಂಧನ-ಕೋಶ ವ್ಯವಸ್ಥೆಯು ಹವಾಮಾನ ಬದಲಾವಣೆಯ ಬಗ್ಗೆ ಮತ್ತು ಭೂಮಿಯನ್ನು ರಕ್ಷಿಸುವ ಬಗೆಗಿನ ಪೋಪ್ ಅವರ
ದೃಷ್ಟಿಗೆ
ಅನುಗುಣವಾಗಿದೆ.
No comments:
Post a Comment