ಭಾಷಾ ಅಭಿವೃದ್ಧಿಗೆ ’ಕನ್ನಡ ಕಾಯಕ ವರ್ಷ’
ಬೆಂಗಳೂರು: ಕನ್ನಡ ಭಾಷೆಯ ಅಬಿವೃದ್ಧಿ ನಿಟ್ಟಿನಲ್ಲಿ 2020 ನವೆಂಬರ್ ೧ ಭಾನುವಾರದಿಂದ ಮುಂದಿನ ವರ್ಷ ಅಕ್ಟೋಬರ್ ೧ ರ ವರೆಗೆ ‘ಕನ್ನಡ ಕಾಯಕ ವರ್ಷ’ವನ್ನು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020 ನವೆಂಬರ್ 1ರ ಭಾನುವಾರ ಘೋಷಿಸಿದರು.
ಬೆಂಗಳೂರು
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ೬೫ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು
ಮಾತನಾಡಿದರು.
’ಕನ್ನಡ
ಭಾಷೆಯ ಬಳಕೆ ನವೆಂಬರ ತಿಂಗಳಿಗಷ್ಟೇ ಸೀಮಿತವಾಗದೆ
ವರ್ಷಪೂರ್ತಿ ಆಚರಿಸುವಂತಾಗಬೇಕು. ಬದಲಾದ ಕಾಲಘಟ್ಟದಲ್ಲಿ ಕನ್ನಡವನ್ನು ತಂತ್ರಜ್ಞಾನದ ಭಾಷೆಯನ್ನಾಗಿ ಮಾಡಬೇಕಾಗಿದೆ.ಇದಕ್ಕಾಗಿ
ಕನ್ನಡ ಕಾಯಕ ವರ್ಷದಲ್ಲಿ ನಾನಾ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ
ಹೇಳಿದರು.
No comments:
Post a Comment