Friday, November 27, 2020

ಸಮುದ್ರಕ್ಕೆ ಅಪ್ಪಳಿಸಿದ ಮಿಗ್ -೨೯ ಕೆ ಟ್ರೈನರ್ ಜೆಟ್: ಪೈಲಟ್ ರಕ್ಷಣೆ

 ಸಮುದ್ರಕ್ಕೆ ಅಪ್ಪಳಿಸಿದ ಮಿಗ್ -೨೯ ಕೆ ಟ್ರೈನರ್ ಜೆಟ್: ಪೈಲಟ್ ರಕ್ಷಣೆ

ನವದೆಹಲಿ: ಭಾರತೀಯ ನೌಕಾಪಡೆಯ ಮಿಗ್ -೨೯ ಕೆ ತರಬೇತುದಾರ ವಿಮಾನವು 2020 ನವೆಂಬರ್ 26ರ ಗುರುವಾರ ಸಂಜೆ ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿ, ಕಣ್ಮರೆಯಾಗಿದೆ.

ವಿಮಾನ ಮತ್ತು ಮೇಲ್ಮೈ ಘಟಕಗಳು ನಡೆಸಿದ ಶೋಧದ ವೇಳೆಯಲ್ಲಿ ಒಬ್ಬ ಪೈಲಟ್ ಪತ್ತೆಯಾಗಿದ್ದು, ಆತನನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ  2020 ನವೆಂಬರ್ 27ರ ಶುಕ್ರವಾರ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಸಂಜೆ ಗಂಟೆ ಸುಮಾರಿಗೆ ದುರ್ಘಟನೆ ಘಟಿಸಿದೆ. ಘಟನೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಅದು ಹೇಳಿದೆ.

"ಸಮುದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಿಗ್ -೨೯ ಕೆ ತರಬೇತುದಾರ ವಿಮಾನವು ನವೆಂಬರ್ ೨೬ ರಂದು ಸುಮಾರು ೧೭೦೦ ಗಂಟೆಗೆ (ಸಂಜೆ ಗಂಟೆ) ಅಪಘಾತಕ್ಕೀಡಾಯಿತು. ಇಬ್ಬರ ಪೈಕಿ ಪೈಲಟ್ನನ್ನು ಪತ್ತೆ ಹಚ್ಚಿ ರಕ್ಷಿಸಲಾಗಿದೆ. ಇನ್ನೊಬ್ಬನಿಗಾಗಿ ವಿಮಾನ ಮತ್ತು ಮೇಲ್ಮೈ ಘಟಕಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ಭಾರತೀಯ ನೌಕಾಪಡೆ ತಿಳಿಸಿತು.

ಘಟನೆಯ ತನಿಖೆಗೆ ಆದೇಶ ನೀಡಲಗಿದೆ ಎಂದು ಅದು ಹೇಳಿತು.

ಭಾರತೀಯ ನೌಕಾಪಡೆಯು ಗೋವಾ ಮೂಲದ ೪೦ ಮಿಗ್ -೨೯ ಕೆ ಯುದ್ಧ ವಿಮಾನಗಳನ್ನು ಹೊಂದಿದೆ ಮತ್ತು ಐಎನ್ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆಯಿಂದಲೂ ಕಾರ್ಯನಿರ್ವಹಿಸುತ್ತದೆ.

No comments:

Advertisement