Monday, November 23, 2020

ಕೊರೋನಾ: ಇಂದು ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಕಾನ್ಫರೆನ್ಸ್

 ಕೊರೋನಾ: ಇಂದು  ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಕಾನ್ಫರೆನ್ಸ್

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ ೨೪ರ ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ 2020 ನವೆಂಬರ 23ರ ಸೋಮವಾರ ತಿಳಿಸಿತು.

ಸಭೆಯಲ್ಲಿ, ದೆಹಲಿ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ಸೇರಿದಂತೆ ಕೊರೋನಾವೈರಸ್ ಸಾಂಕ್ರಾಮಿಕದಿಂದ ಅತಿ ಹೆಚ್ಚು ಪೀಡಿತವಾಗಿರುವ ರಾಜ್ಯಗಳ ಪರಿಸ್ಥಿತಿಯನ್ನು ಪ್ರಧಾನಿ ಪರಿಶೀಲಿಸುವ ನಿರೀಕ್ಷೆಯಿದೆ. ದೆಹಲಿ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕೋವಿಡ್ -೧೯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು ಅವು ಸಾಂಕ್ರಾಮಿಕದ ಹೊಸ ಹಾಟ್ ಸ್ಪಾಟ್‌ಗಳಾಗಿ ಹೊರಹೊಮ್ಮಿವೆ.

ಭಾರತದಲ್ಲಿ ನಾಲ್ಕು ಲಸಿಕೆ ತಯಾರಕ ಸಂಸ್ಥೆಗಳು ಎರಡನೇ ಅಥವಾ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿರುವುದರಿಂದ ಲಸಿಕೆ ವಿತರಣೆ ಮತ್ತು ತುರ್ತು ದೃಢೀಕರಣದ ಬಗ್ಗೆ ಕೂಡಾ ಪ್ರಧಾನಿಯವರು ರಾಜ್ಯಗಳ ಜೊತೆಗೆ ಚರ್ಚಿಸುವ ಸಾಧ್ಯತೆ ಇದೆ.

ಫಿಜರ್ ಮತ್ತು ಮೊಡೆರ್ನಾ ತಮ್ಮ ಲಸಿಕೆಗಳ ವಿತರಣೆಗೆ ತುರ್ತು ಅಧಿಕಾರವನ್ನು ಪಡೆಯುವುದಾಗಿ ಹೇಳಿದ ನಂತರ ನಡೆದ ನೀತಿ ಆಯೋಗದ ಇತ್ತೀಚಿನ ಸಭೆಯಲ್ಲಿ, ತುರ್ತು ದೃಢೀಕರಣ, ಮುಂಗಡ ಸಂಗ್ರಹಣೆ, ಲಸಿಕೆಗಳ ಬೆಲೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಉಭಯ ಸಂಸ್ಥೆಗಳೂ ತಮ್ಮ ಲಸಿಕೆಗಳು  ಅಂದಾಜು ಶೇಕಡಾ ೯೫ರಷ್ಟು  ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿರುವುದಾಗಿ ಪ್ರಕಟಿಸಿದ್ದವು.

ರಾಜ್ಯ ಮುಖ್ಯಮಂತ್ರಿಗಳ ಜೊತೆಗಿನ ಪ್ರಧಾನಿ ಮೋದಿಯವರ ಸಭೆಯು ಕೋವಿಡ್ ಸಾಂಕ್ರಾಮಿಕ ಹರಡುವಿಕೆ ತಡೆ ಹಾಗೂ ಸಾರ್ವಜನಿಕ ಆರೋಗ್ಯ ಮೂಲ ಸೌಕರ್ಯಗಳ ಮೇಲಿನ ಹೊರ ಕಡಿಮೆ ಮಾಡುವ ಕಾರ್‍ಯತಂತ್ರ ರೂಪಿಸುವ ನಿಟ್ಟಿನಲ್ಲಿ ರಾಜ್ಯಗಳ ಜೊತೆ ನಡೆಸಲಾದ ಹಲವಾರು ಸಭೆಗಳಲ್ಲಿ ಒಂದಾಗಿದೆ.

ಕೋವಿಡ್ -೧೯ ವಿರುದ್ಧದ ಹೋರಾಟವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗ ಮತ್ತು ನಿಕಟ ಹೊಂದಾಣಿಕೆಯೊಂದಿಗೆ ಕೇಂದ್ರ ಸರ್ಕಾರವು ಮುನ್ನಡೆಸುತ್ತಿದೆ ಮತ್ತು ಆರೋಗ್ಯ ಹಾಗೂ ವೈದ್ಯಕೀಯ ಮೂಲ ಸೌಕರ್‍ಯಗಳನ್ನು ಹೆಚ್ಚಿಸಲು ಅದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಬೆಂಬಲ ನೀಡುತ್ತಿದೆ.

ಭಾರತzಲ್ಲಿ ಸೋಮವಾರ, ಒಂದೇ ದಿನದಲ್ಲಿ ೪೪,೦೫೯ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದರೆ, ಚೇತರಿಕೆ ಪ್ರಕರಣಗಳ ಸಂಖ್ಯೆ ೮೫,೬೨,೬೪೧ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಪ್ರಸ್ತುತ ,೪೩,೪೮೬ ಕೊರೋನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ .೮೫ ರಷ್ಟಿದೆ ಎಂದು ಭಾರತದ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.

ಕಳೆದ ೧೬ ದಿನಗಳಿಂದ ಭಾರತವು ಪ್ರತಿದಿನ ೫೦,೦೦೦ ಕ್ಕಿಂತ ಕಡಿಮೆ ಕೋವಿಡ್ -೧೯ ಪ್ರಕರಣಗಳನ್ನು ದಾಖಲಿಸುತ್ತಿದೆ.

No comments:

Advertisement