Tuesday, November 3, 2020

ಕರ್ನಾಟಕ, ಮ.ಪ್ರ.ದಲ್ಲೂ ಮದುವೆಗಾಗಿ ಮತಾಂತರ ವಿರುದ್ಧ ಕಾನೂನು

 ಕರ್ನಾಟಕ, ಮ.ಪ್ರ.ದಲ್ಲೂ ಮದುವೆಗಾಗಿ ಮತಾಂತರ ವಿರುದ್ಧ ಕಾನೂನು

ನವದೆಹಲಿ: ’ಲವ್ ಜಿಹಾದ್ತಡೆಗಾಗಿ ಕಾನೂನು ರೂಪಿಸುವುದಾಗಿ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಪ್ರಕಟಿಸಿದ ಬೆನ್ನಲ್ಲೇ ಕರ್ನಾಟಕ ಮತ್ತು ಮಧ್ಯಪ್ರದೇಶ ಕೂಡಾ ನಿಟ್ಟಿನಲ್ಲಿ ಸಾಗಿವೆ.

ಮದುವೆ ಸಲುವಾಗಿ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಕಾನೂನು ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ 2020 ನವೆಂಬರ್ 03ರ ಮಂಗಳವಾರ ಹೇಳಿದರು. ಇದೇ ಮಾದರಿಯ ಪ್ರಕಟಣೆಯನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಡಿದರು.

ಜಿಹಾದಿಗಳುರಾಜ್ಯದ ಮಹಿಳೆಯರ ಘನತೆಯನ್ನು ತೆಗೆದುಹಾಕಿದಾಗ ಸರ್ಕಾರ ಮೌನವಾಗಿರುವುದಿಲ್ಲ ಎಂದು ಕರ್ನಾಟಕ ಸಚಿವ ಸಿಟಿ ರವಿ ಹೇಳಿದರು.

ವಿವಾಹದ ಉದ್ದೇಶಕ್ಕಾಗಿ ಧರ್ಮವನ್ನು ಪರಿವರ್ತಿಸುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟ ಕೆಲವೇ ದಿನಗಳ ನಂತರ ಹೇಳಿಕೆ ಬಂದಿತು. ಹಿಂದೆ ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶಗಳುಲವ್ ಜಿಹಾದ್ವಿರುದ್ಧ ಕಾನೂನು ತರುವ  ಉದ್ದೇಶವನ್ನು ಪ್ರಕಟಿಸಿದ್ದವು.

"ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಕರ್ನಾಟಕವು ಮದುವೆಗಾಗಿ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲಿದೆ. ಜಿಹಾದಿಗಳು ನಮ್ಮ ಸಹೋದರಿಯರ ಘನತೆಯನ್ನು ತೆಗೆದುಹಾಕಿದಾಗ ನಾವು ಮೌನವಾಗಿರುವುದಿಲ್ಲಎಂದು ರವಿ ಟ್ವೀಟ್ ಮಾಡಿದ್ದಾರೆ. ಯಾವುದೇ ಮತಾಂತರದ ಕೃತ್ಯದಲ್ಲಿ ಭಾಗಿಯಾದ ಯಾರಾದರೂ ಕಠಿಣ ಮತ್ತು ತ್ವರಿತ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಅಕ್ಟೋಬರ್ ೩೧ ರಂದು ಅಲಹಾಬಾದ್ ಹೈಕೋರ್ಟ್ ತನ್ನ ಆದೇಶದಲ್ಲಿ ಕೇವಲ ವಿವಾಹದ ಉದ್ದೇಶದಿಂದ ನಡೆಯುವ ಧಾರ್ಮಿಕ ಮತಾಂತರವು ಮಾನ್ಯವಲ್ಲ ಎಂದು ಹೇಳಿದೆ. ಉತ್ತರಪ್ರದೇಶದಲ್ಲಿ ಹೊಸದಾಗಿ ವಿವಾಹಿತರಾದ ದಂಪತಿ ರಕ್ಷಣೆ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯವು ತಳ್ಳಿಹಾಕಿತ್ತು. ತಮ್ಮ ವೈವಾಹಿಕ ಜೀವನಕ್ಕೆ ತೊಂದರೆ ಮಾಡದಂತೆ ಪೊಲೀಸರು ಮತ್ತು ಮಹಿಳೆಯ ತಂದೆಗೆ ನಿರ್ದೇಶನ ನೀಡುವಂತೆ ವಿವಾಹಿತ ದಂಪತಿ ನ್ಯಾಯಾಲಯವನ್ನು ಕೋರಿದ್ದರು.

ಪ್ರಸ್ತುತ ವರ್ಷದ ಜುಲೈ ತಿಂಗಳಲ್ಲಿ ದಂಪತಿ ವಿವಾಹವಾಗಿದ್ದಾರೆ, ಆದರೆ ಮಹಿಳೆಯ ಕುಟುಂಬ ಸದಸ್ಯರು ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಮಧ್ಯಪ್ರದೇಶದ ಮುಖ್ಯಮಂತ್ರಿ ಹೇಳಿಕೆ

ಭೋಪಾಲ್ ವರದಿ: ಉತ್ತರ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಅಂತರ್ ಧರ್ಮ ವಿವಾಹಗಳ ವಿರುದ್ಧ ಕಾನೂನು ರೂಪಿಸುವ ಪ್ರಸ್ತಾಪ ಮಾಡಿದ ಬೆನ್ನಲ್ಲೇ ಮಧ್ಯಪ್ರದೇಶವೂ ಅಂತರ್ ಧರ್ಮದ ವಿವಾಹಗಳ ವಿರುದ್ಧ ಕಾನೂನು ರೂಪಿಸಲು ಸಜ್ಜಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಅಗತ್ಯವಿದ್ದಲ್ಲಿ ಅಂತರ್ ಧರ್ಮ ವಿವಾಹಗಳನ್ನು ತಡೆಯಲು ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಚೌಹಾಣ್ ವಿಧಾನಸಭಾ ಉಪಚುನಾವಣೆಯ ಮುನ್ನಾದಿ ಹೇಳಿಕೆ ನೀಡಿದರು.

ಪ್ರೀತಿಯ ಹೆಸರಿನಲ್ಲಿ ಯಾವುದೇ ಜಿಹಾದ್ ಇರುವುದಿಲ್ಲ. ಯಾರಾದರೂ ಅಂತಹ ಅಭ್ಯಾಸದಲ್ಲಿ ತೊಡಗಿದರೆ, ಅವರಿಗೆ ಪಾಠ ಕಲಿಸಲಾಗುತ್ತದೆ ಮತ್ತು ಇದಕ್ಕಾಗಿ ಕಾನೂನು ಜಾರಿಗೆ ತರಲಾಗುವುದುಎಂದು ಮುಖ್ಯಮಂತ್ರಿ ಹೇಳಿದರು.

ಬಿಜೆಪಿ ಆಳ್ವಿಕೆಯ ಉತ್ತರ ಪ್ರದೇಶ (ಯುಪಿ) ಮತ್ತು ಹರಿಯಾಣ ಇದಕ್ಕೆ ಮುನ್ನವೇ ಅಂತರ್ ಧರ್ಮ ವಿವಾಹಗಳ ವಿರುದ್ಧ ಕಾನೂನು ಜಾರಿಗೆ ತರಲು ಯೋಚಿಸುತ್ತಿರುವುದಾಗಿ ಪ್ರಕಟಿಸಿದ್ದವು.

ಕಳೆದ ಗುರುವಾರ ಭೋಪಾಲ್ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್ ವಿರುದ್ಧ ಕೆರಳಿದ ಕಾರ್ಟೂನ್ ಬಿಕ್ಕಟ್ಟು ಕುರಿತು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಚೌಹಾಣ್,’ಅನುಮತಿಯಿಲ್ಲದೆ ಯಾವುದೇ ಪ್ರದರ್ಶನ ನಡೆಸಲು ಮಧ್ಯಪ್ರದೇದಲ್ಲ್ಲಿ ಅನುಮತಿ ನೀಡಲಾಗುವುದಿಲ್ಲ. ರಾಜ್ಯದಲ್ಲಿ ಶಾಂತಿಯನ್ನು ಭಂಗಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ನುಡಿದರು.

No comments:

Advertisement