Monday, November 16, 2020

ಮೊಡೆರ್ನಾ ಕೋವಿಡ್ -೧೯ ಲಸಿಕೆ ಶೇಕಡಾ ೯೪.೫ರಷ್ಟು ಪರಿಣಾಮಕಾರಿ

 ಮೊಡೆರ್ನಾ ಕೋವಿಡ್ -೧೯ ಲಸಿಕೆ ಶೇಕಡಾ ೯೪.೫ರಷ್ಟು ಪರಿಣಾಮಕಾರಿ

ವಾಷಿಂಗ್ಟನ್: ವಿಶ್ವಾದ್ಯಂತ ಮತ್ತೆ ತಲೆಎತ್ತಿಕೊಂಡು ದಿನಕ್ಕೆ ಅಂದಾಜು ೮೦೦೦ ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿರುವ ಕೊರೋನಾವೈರಸ್ (ಕೋವಿಡ್-೧೯) ಸೋಂಕನ್ನು ಹಣಿಯುವಲ್ಲಿ ತನ್ನ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಮೊಡೆರ್ನಾ 2020 ನವೆಂಬರ್ 2020ರ ಸೋಮವಾರ ಪ್ರತಿಪಾದಿಸಿತು.

ಮಹತ್ವದ ಪ್ರಯೋಗದಲ್ಲಿ ತನ್ನ ಕೋವಿಡ್-೧೯ ಲಸಿಕೆಯು ಶೇಕಡಾ ೯೪.೫ರಷ್ಟು ಪರಿಣಾಮಕಾರಿಯಾಗಿದೆ ಎಂದು ಮಾಡೆರ್ನಾ ಕಂಪೆನಿ ಹೇಳಿತು.

ಮಾಡೆರ್ನಾ ನಡೆಸುತ್ತಿರುವ ಅಧ್ಯಯನದ ಪ್ರಾಥಮಿಕ ಮಾಹಿತಿಯ ಪ್ರಕಾರ, ಅದರ ಲಸಿಕೆಯು ಶೇಕಡಾ ೯೪.೫ರಷ್ಟು  ಪರಿಣಾಮಕಾರಿಯಾಗಿರುವುದು ಶ್ರುತಪಟ್ಟಿದೆ ಎಂದು ಕಂಪೆನಿ ಹೇಳಿತು. ಒಂದು ವಾರದ ಹಿಂದೆ, ಪ್ರತಿಸ್ಪರ್ಧಿ ಫಿಜರ್ ಇಂಕ್ ತನ್ನ ಕೋವಿಡ್-೧೯ ಲಸಿಕೆ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿತ್ತು. ಅಮೆರಿಕದಲ್ಲಿ ತುರ್ತು ಬಳಕೆಗಾಗಿ ಅನುಪತಿ ಪಡೆಯಲು ಉಭಯ ಕಂಪೆನಿಗಳೂ ಯತ್ನಿಸುತ್ತಿವೆ.

ಅಮೆರಿಕದಲಿ ಕಳೆದ ವಾರಾಂತ್ಯಕ್ಕೆ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ೧೧ ಮಿಲಿಯನ್ಗೆ (.೧೦ ಕೋಟಿ) ಏರಿಕೆಯಾಗಿದ್ದು ವೇಗದಲ್ಲಿ ಲಸಿಕೆ ಸಂಶೋಧನೆ ಸಾಧ್ಯವಾಗುತ್ತಿಲ್ಲ. ಇದರಲ್ಲಿ ಮಿಲಿಯನ್ ಪ್ರಕರಣಗಳು ಕಳೆದ ಒಂದೇ ವಾರದಲ್ಲಿ ದಾಖಲಾಗಿವೆ.

ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ . ದಶಲಕ್ಷಕ್ಕೂ (. ಕೋಟಿ) ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಪೈಕಿ ಅಮೆರಿಕ ಒಂದರಲ್ಲೇ ಸಾವನ್ನಪ್ಪಿದವರ ಸಂಖ್ಯೆ ,೪೫,೦೦೦ ಕ್ಕೂ ಹೆಚ್ಚು.

ಕಂಪೆನಿಯು ಮಹತ್ವದ ಮೈಲಿಗಲ್ಲು ಸ್ಥಾಪಿಸಿರುವುದನ್ನು ಮಾಡೆರ್ನಾಸ್ ಅಧ್ಯಕ್ಷ ಡಾ. ಸ್ಟೀಫನ್ ಹೊಗೆ ಸ್ವಾಗತಿಸಿದರು. ಜೊತೆಗೆ, ಎರಡು ವಿಭಿನ್ನ ಕಂಪೆನಿಗಳಿಂದಲೂ ಇದೇ ರೀತಿಯ ಫಲಿತಾಂಶ ಬಂದಿರುವುದು ಹೆಚ್ಚು ಧೈರ್ಯ ತುಂಬುತ್ತದೆ ಎಂದು ಹೇಳಿದರು.

ಲಸಿಕೆಯಿಂದ ಸಾಂಕ್ರಾಮಿಕ ರೋಗವನ್ನು ತಡೆಯಲು ಸಾಧ್ಯವಾಗುತ್ತದೆ ಮತ್ತು ಆಶಾದಾಯಕವಾಗಿ ನಮ್ಮನ್ನು ನಮ್ಮ ಸಹಜ ಜೀವನಕ್ಕೆ ಮರಳಿಸುತ್ತದೆ ಎಂಬ ಭರವಸೆ ನಮಗೆಲ್ಲರಿಗೂ ಬರಬೇಕು ಎಂದು ಹೊಗೆ ಅವರು ಹೇಳಿದರು.

ಸಮಸ್ಯೆಯನ್ನು ಪರಿಹರಿಸಲು ಮೊಡೆರ್ನಾ ಒಂದರಿಂದ ಮಾತ್ರ ಸಾಧ್ಯವಿಲ್ಲ. ಜಾಗತಿಕ ಬೇಡಿಕೆಯನ್ನು ಪೂರೈಸಲು ಹಲವು ಲಸಿಕೆಗಳು ಬೇಕಾಗುತ್ತವೆ ಎಂದು ಅವರು ನುಡಿದರು.

ಅಮೆರಿಕದ ಔಷಧ ನಿಯಂತ್ರಕರು ಮಾಡೆರ್ನಾ ಅಥವಾ ಫಿಜರ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮತಿ ನೀಡಿದರೆ, ವರ್ಷಾಂತ್ಯದ ಮೊದಲು ಸೀಮಿತವಾಗಿ ಅವುಗಳನ್ನು ವಿತರಿಸಬಹುದು. ಉಭಯ ಔಷಧಿಗಳನ್ನು ಜನರಿಗೆ ಎರಡು ವಾರಗಳ ಅಂತರದಲ್ಲಿ ಎರಡು ಬಾರಿ ನೀಡಬೇಕಾಗುತ್ತದೆ. ೨೦೨೦ ಅಂತ್ಯದ ವೇಳೆಗೆ ಅಮೆರಿಕಕ್ಕೆ ಮಾತ್ರವೇ ಸುಮಾರು ೨೦ ಮಿಲಿಯನ್ ಡೋಸ್ಗಳನ್ನು ಬೇಕಾಗುತ್ತದೆ ಎಂದು ಮಾಡೆರ್ನಾ ನಿರೀಕ್ಷಿಸಿದೆ. 

ಫಿಜರ್ ಮತ್ತು ಅದರ ಜರ್ಮನ್ ಪಾಲುದಾರ ಬಯೋಎಂಟೆಕ್ ವರ್ಷಾಂತ್ಯದಲ್ಲಿ ಜಾಗತಿಕವಾಗಿ ಸುಮಾರು ೫೦ ಮಿಲಿಯನ್ ಡೋಸ್ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಷೇರು ಮಾರುಕಟ್ಟೆಯಲ್ಲಿ ಉತ್ಸಾಹ

ಮಾಡೆರ್ನಾ ಲಸಿಕೆ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬ ಸುದ್ದಿ ಹೊರಬೀಳುವುದೇ ತಡ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ತತ್ ಕ್ಷಣವೇ ಪ್ರತಿಕ್ರಿಯೆ ಕಂಡು ಬಂತು. ಮಾರುಕಟ್ಟೆ ಗಳಿಕೆ ದ್ವಿಗುಣಗೊಂಡಿತು. ಆರಂಭಿಕ ಗಂಟೆಯಲ್ಲಿ ಸೂಚ್ಯಂಕ ೫೦೦ ಪಾಯಿಂಟ್ಗಳಷ್ಟು ಜಿಗಿಯಿತು. ಮಾಡೆರ್ನಾ ಷೇರುಗಳ ಬೆಲೆ ಶೇಕಡ ೧೩ರಷ್ಟು ಏರಿದ್ದು, ಇದು ಸಾರ್ವಕಾಲಿಕ ಮಟ್ಟಕ್ಕೆ ಮುಟ್ಟುವ ನಿರೀಕ್ಷೆ ವ್ಯಕ್ತವಾಗಿದೆ. ಏಷ್ಯಾ ಮತ್ತು ಐರೋಪ್ಯ ಷೇರು ಮಾರುಕಟ್ಟೆಯಲ್ಲೂ ದರಗಳು ತೀವ್ರವಾಗಿ ಏರಿದವು.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲಾದ ಮಾಡೆರ್ನಾ ಲಸಿಕೆಯನ್ನು ನಿಜವಾದ ವ್ಯಾಕ್ಸಿನೇಷನ್ ಅಥವಾ ಡಮ್ಮಿ ಶಾಟ್ ಪಡೆದ ೩೦,೦೦೦ ಸ್ವಯಂಸೇವಕರಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಭಾನುವಾರ, ಸ್ವತಂತ್ರ ಮಾನಿಟರಿಂಗ್ ಬೋರ್ಡ್ ಸ್ವಯಂಸೇವಕರ ಎರಡನೇ ಡೋಸ್ ನೀಡಿದ ಎರಡು ವಾರಗಳ ನಂತರ ದಾಖಲಾದ ೯೫ ಸೋಂಕುಗಳನ್ನು ಪರೀಕ್ಷಿಸಲಾಯಿತು ಮತ್ತು ಪ್ಲೇಸಿಬೊ ಪಡೆದವರಲ್ಲಿ  ಐದು ಕಾಯಿಲೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಪತ್ತೆ ಹಚ್ಚಲಾಯಿತು.

ಮುಖ್ಯ ಅಡ್ಡ ಪರಿಣಾಮಗಳು ಲಸಿಕೆಗಳ ಎರಡನೇ ಡೋಸ್ ನಂತರ ಆಯಾಸ, ಸ್ನಾಯು ನೋವು ಮತ್ತು ಇಂಜೆಕ್ಷನ್ ನೀಡಿದ ಸ್ಥಳದ ನೋವು, ಹೊಗೆ ಫ್ಲೂ  ಸಾಮಾನ್ಯವಾಗಿ ಕಂಡು ಬಂದಿತು.

No comments:

Advertisement