ಚಂದ್ರನ ಮೇಲೆ ಧ್ವಜ ನೆಟ್ಟ ಚೀನಾ
ಬೀಜಿಂಗ್: ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿಯಾಗಿದ್ದು, ಚಂದ್ರ ಗ್ರಹದ ಮೇಲೆ ತನ್ನ ರಾಷ್ಟ್ರಧ್ವಜವಾದ ಕೆಂಬಾವುಟವನ್ನು ಅದು ನೆಟ್ಟಿದೆ. ಇದರೊಂದಿಗೆ ಚಂದ್ರನಲ್ಲಿ ಇಳಿದು ರಾಷ್ಟ್ರಧ್ವಜ ನೆಡುವ ಸಾಧನೆ ಮಾಡಿದ ಜಗತ್ತಿನ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಯಿತು.
೫೦
ವರ್ಷಗಳ ಹಿಂದೆ ಅಮೆರಿಕ ಈ ಸಾಧನೆ ಮಾಡಿದ
ಮೊದಲ ರಾಷ್ಟ್ರ ಎನಿಸಿತ್ತು.
ತೀವ್ರ
ಕಸರತ್ತಿನ ಬಳಿಕ ಚೀನಾ ಚಂದ್ರನ ಅಧ್ಯಯನಕ್ಕೆ ನೌಕೆ ಕಳಿಸಿತ್ತು. ಅದರ ಈ ಸಾಹಸ ಯಾತ್ರೆ
ಯಾವುದೇ ಅಡ್ಡಿ ಎದುರಾಗದೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹೆಮ್ಮೆಯ ಸಂಕೇತವಾಗಿ ನೌಕೆ ಭೂಮಿಯತ್ತ ವಾಪಸಾಗುವ ಮುನ್ನ ಚಂದ್ರನ ಮೇಲೆ ಚೀನಾದ ರಾಷ್ಟ್ರಧ್ವಜವನ್ನು ನೆಟ್ಟಿದೆ.
ಚಾಂಗ್’ಇ
-೫ ನೌಕೆಗೆ ಅಳವಡಿಸಿದ್ದ ಕ್ಯಾಮರಾ ಮೂಲಕ ಧ್ವಜ ಹಾರಾಟದ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಆ ಚಿತ್ರಗಳನ್ನು 2020 ಡಿಸೆಂಬರ್ 05ರ ಶನಿವಾರ ಹಂಚಿಕೊಂಡಿತು. ಚಂದ್ರನ
ಮೇಲೆ ಹಾರಿಸಿರುವ ಚೀನಾ ಧ್ವಜವು ೨ ಮೀ. ಉದ್ದ
೯೦ ಸೆಂ.ಮೀ ಅಗಲ ಇದೆ.
ಇದುವರೆಗೆ
ಹಲವು ರಾಷ್ಟ್ರಗಳು ಚಂದ್ರಯಾನಕ್ಕೆ ಪ್ರಯತ್ನ ಮಾಡಿದ್ದು, ಅಮೆರಿಕ, ರಷ್ಯಾ ನಂತರ ಚೀನಾ ದೇಶವು ಚಂದ್ರನ ಮೇಲ್ಭಾಗದಿಂದ ಮಣ್ಣು ಸಂಗ್ರಹಿಸಿ ತಂದ ಮೂರನೇ ಯಶಸ್ವಿ ರಾಷ್ಟ್ರ ಎನಿಸಿತ್ತು.
No comments:
Post a Comment