Tuesday, December 29, 2020

ರಜನಿಕಾಂತ್ ನಿರ್ಧಾರಕ್ಕೆ ಕಮಲಹಾಸನ್ ನಿರಾಶೆ

 ರಜನಿಕಾಂತ್ ನಿರ್ಧಾರಕ್ಕೆ ಕಮಲಹಾಸನ್ ನಿರಾಶೆ

ನವದೆಹಲಿ: ರಾಜಕಾರಣಿಯಾಗಿ ಬದಲಾದ ನಟ ಕಮಲ ಹಾಸನ್ ಅವರು 2020 ಡಿಸೆಂಬರ್ 2020ರ ಮಂಗಳವಾರ ಸಹನಟ ರಜನಿಕಾಂತ್ ಅವರು ಆರೋಗ್ಯದ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಇಳಿಯುವುದಿಲ್ಲ ಎಂಬುದಾಗಿ ಮಾಡಿರುವ ಘೋಷಣೆಯಿಂದನಿರಾಶೆಗೊಂಡಿರುವುದಾಗಿ ಹೇಳಿದರು.

ಅಧಿಕ ರಕ್ತದೊತ್ತಡಕ್ಕಾಗಿ ಚಿಕಿತ್ಸೆ ಪಡೆದ ಹೈದರಾಬಾದ್ ಆಸ್ಪತ್ರೆಯಿಂದ ಹೊರಬಂದ ಒಂದು ದಿನದ ನಂತರ ರಜನಿಕಾಂತ್ ಅವರ ನಿರ್ಧಾರವು ಬಂದಿದೆ.

ನನ್ನ ಚುನಾವಣಾ ಪ್ರಚಾರದ ನಂತರ ನಾನು ಮತ್ತೆ ರಜನಿಕಾಂತ್ ಅವರನ್ನು ಭೇಟಿಯಾಗುತ್ತೇನೆ. ಅವರ ಅಭಿಮಾನಿಗಳಂತೆ ನಾನು ಕೂಡ ನಿರಾಶೆಗೊಂಡಿದ್ದೇನೆ ಆದರೆ ಅವರ ಆರೋಗ್ಯ ನನಗೆ ಮುಖ್ಯವಾಗಿದೆ ಎಂದುಮಕ್ಕಲ್ ನೀಧಿ ಮಾಯಂ ಮುಖ್ಯಸ್ಥ ಕಮಲ ಹಾಸನ್ ಹೇಳಿದ್ದನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥಿ ವರದಿ ತಿಳಿಸಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ದುರ್ಬಲ ಆರೋಗ್ಯವನ್ನು ಉಲ್ಲೇಖಿಸಿ ರಾಜಕೀಯಕ್ಕೆ ಧುಮುಕುವುದಿಲ್ಲ ಮತ್ತು ಮೊದಲೇ ಘೋಷಿಸಿದಂತೆ ಪಕ್ಷವನ್ನು ಪ್ರಾರಂಭಿಸುವುದಿಲ್ಲ ಎಂದು ಇದಕ್ಕೆ ಮುನ್ನ ಪ್ರಕಟಿಸಿದ್ದರು.

ಆದ್ದರಿಂದ, ರಾಜಕೀಯ ಪಕ್ಷವನ್ನು ಆರಂಭಿಸುವ ಮೂಲಕ ರಾಜಕೀಯಕ್ಕೆ ಬರಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ನಾನು ಬಹಳ ವಿಷಾದದಿಂದ ತಿಳಿಸುತ್ತಿದ್ದೇನೆ. ಘೋಷಣೆ ಮಾಡುವುದರ ಹಿಂದಿನ ನೋವು ನನಗೆ ಮಾತ್ರ ತಿಳಿದಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು. ಆದಾಗ್ಯೂ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸದೆ ಜನರಿಗೆ ಯಾವುದೇ ರೀತಿಯಲ್ಲಿ ಸೇವೆ ಸಲ್ಲಿಸುವೆ ಎಂದು ಅವರು ಹೇಳಿದ್ದರು.

೭೦ ಹರೆಯದ ರಜನಿಕಾಂತ್ ತಮ್ಮ ರಾಜಕೀಯ ಪಕ್ಷವನ್ನು ಜನವರಿಯಲ್ಲಿ ಪ್ರಾರಂಭಿಸುವುದಾಗಿ ಮತ್ತು  ಡಿಸೆಂಬರ್ ೩೧ ರೊಳಗೆ ವಿವರಗಳನ್ನು ಪ್ರಕಟಿಸುವುದಾಗಿ ತಿಂಗಳ ಆರಂಭದಲ್ಲಿ ಘೋಷಿಸಿದ್ದರು. ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಾವು ನಿಜವಾಗಿಯೂ ರಾಜಕೀಯಕ್ಕೆ ಪ್ರವೇಶಿಸುವುದಾಗಿ ಮತ್ತು ೨೦೨೧ರ ರಾಜ್ಯ ವಿಧಾಸಭಾ ಚುನಾವಣೆಯಲ್ಲಿ ಎಲ್ಲ ೨೩೪ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಇಳಿಸುವುದಾಗಿ ೨೦೧೭ ರಲ್ಲಿ ಅವರು ಘೋಷಿಸಿದ್ದರು.

ರಜನಿಕಾಂತ್ ಅವರಿಗಿಂತ ಭಿನ್ನವಾಗಿ, ಕಮಲ ಹಾಸನ್ ೨೦೧೮ ರಲ್ಲಿ ಮಧುರೈನಲ್ಲಿ ಮಕ್ಕಲ್ ನೀಧಿ ಮಾಯಂ (ಎಂಎನ್‌ಎಂ) ಪಕ್ಷವನ್ನು ಪ್ರಾರಂಭಿಸಿದ್ದರು. ಮತ್ತು ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಹೋರಾಡಿ ಶೇ . ರಷ್ಟು ಮತ ಪಡೆದಿದ್ದರು. ಜನವರಿಯಲ್ಲಿ ಚಿತ್ರದ ಚಿತ್ರೀಕರಣಕ್ಕೆ ತೆರಳುವ ಮುನ್ನ ಕಮಲ್ ಹಾಸನ್ ತಮ್ಮ ಅಭಿಯಾನದ ಎರಡನೇ ಹಂತದ ಪ್ರಚಾರ ನಡೆಸಿದ್ದರು.

ಕಮಲ ಹಾಸನ್ ಅವರು ಡಿಎಂಕೆ, ಎಐಎಡಿಎಂಕೆ ಮತ್ತು ಅವುಗಳ ರಾಷ್ಟ್ರೀಯ ಪಾಲುದಾರರಾದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಸ್ಪರ್ಧಿಸಲಿದ್ದಾರೆ. ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಮತ್ತು ಡಿಎಂಕೆ ನಾಯಕ ಎಂ ಕರುಣಾನಿಧಿ ಅವರ ಮರಣದ ನಂತರ ಇದು ಮೊದಲ ರಾಜ್ಯ ಚುನಾವಣೆಯಾಗಿದೆ.

No comments:

Advertisement