Saturday, December 26, 2020

ಜಮ್ಮು –ಕಾಶ್ಮೀರಕ್ಕೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ

 ಜಮ್ಮು –ಕಾಶ್ಮೀರಕ್ಕೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ

ನವದೆಹಲಿ: ’ದೆಹಲಿಯಲ್ಲಿನ ನನ್ನ ಟೀಕಾಕಾರರು ಜಮ್ಮು ಮತ್ತು ಕಾಶ್ಮೀರದಿಂದ ಪಾಠ ಕಲಿಯಬೇಕು ಎಂದು ವಿರೋಧ ಪಕ್ಷಗಳಿಗೆ 2020 ಡಿಸೆಂಬರ್ 26ರ ಶನಿವಾರ ಟಾಂಗ್ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರಕ್ಕೆ ಪ್ರಿಯವಾದಆಯುಷ್ಮಾನ್ ಭಾರತ ವೈದ್ಯಕೀಯ ವಿಮಾ ಯೋಜನೆಯನ್ನು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸಿದರು.

ಪಂಚಾಯತ್ ಚುನಾವಣೆ ವಿಳಂಬದ ವಿಷಯದಲ್ಲಿ ಹಿಂದಿನ ಜಮ್ಮು ಮತ್ತು ಕಾಶ್ಮೀg ರಾಜ್ಯದಲ್ಲಿ ಪಿಡಿಪಿಯೊಂದಿಗೆ ಮಾಡಿಕೊಳ್ಳಲಾಗಿದ್ದ ಹೊಂದಾಣಿಕೆಯನ್ನು ರದ್ದು ಪಡಿಸಿ ಬಿಜೆಪಿ ಅಧಿಕಾರದಿಂದ ಹೊರನಡೆದಿತ್ತು ಎಂದು ಪ್ರಧಾನಿಯವರು ಆಯುಷ್ಮಾನ್ ಭಾರತ ಯೋಜನೆಯನ್ನು ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸುತ್ತಾ ಹೇಳಿದರು.

ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಮುಕ್ತಾಯದೊಂದಿಗೆ ಜಮ್ಮು ಮತ್ತು ಕಾಶ್ಮೀರದಲಿ ಹೊಸ ದಶಕವನ್ನು ಬರೆಯಲಾಗಿದೆ ಎಂದು ಅವರು ನುಡಿದರು.

"ನಾವು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸರ್ಕಾರದ ಭಾಗವಾಗಿದ್ದೆವು ಆದರೆ ಪಂಚಾಯತ್ ಚುನಾವಣೆ ವಿಳಂಬದ ಕಾರಣಕ್ಕಾಗಿ ನಾವು ಸರ್ಕಾರದಿಂದ ಹೊರಬಂದಿದ್ದೆವು ಮತ್ತು ಸಾಮಾನ್ಯ ವ್ಯಕ್ತಿಯೊಂದಿಗೆ ರಸ್ತೆಗೆ ಬಂದೆವು ಎಂದು ಪ್ರಧಾನಿ ಹೇಳಿದರು.

ಡಿಡಿಸಿ ಮತದಾನದ ಮುಕ್ತಾಯದೊಂದಿಗೆ, ಮೂರು ಹಂತದ ತಳಮಟ್ಟದ ಪ್ರಜಾಪ್ರಭುತ್ವದ [ಬ್ಲಾಕ್, ಪಂಚಾಯತ್ ಮತ್ತು ಜಿಲ್ಲಾ ಮಂಡಳಿಗಳ] ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಕನಸನ್ನು ನಾವು ನನಸಾಗಿಸಿದ್ದೇವೆ. ನಾನು ಚುನಾವಣೆಯ ಪ್ರತಿಯೊಂದು ಹಂತವನ್ನು ಅನುಸರಿಸಿದ್ದೇನೆ ಮತ್ತು ತೀವ್ರವಾದ ಚಳಿ ಮತ್ತು ಸಾಂಕ್ರಾಮಿಕ ರೋಗದ ರೋಗದ ನಡುವೆಯೂ ಯುವಕರು, ವೃದ್ಧರು ಮತ್ತು ಮಹಿಳೆಯರು ಮತ ಚಲಾಯಿಸಲು ಹೇಗೆ ಬಂದರು ಎಂದು ನಾನು ನೋಡಿದ್ದೇನೆ. ಹಿಂದಿನದನ್ನು ಬಿಟ್ಟು ಉತ್ತಮ ಭವಿಷ್ಯಕ್ಕಾಗಿ ಹಾರೈಸುವ ಕನಸನ್ನು ನಾನು ಅವರ ಕಣ್ಣುಗಳಲ್ಲಿ ನೋಡಿದ್ದೇನೆ. ಜಮ್ಮು ಮತ್ತು ಕಾಶ್ಮೀರ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಿದೆ ಎಂದು ಶಾಂತಿಯುತ ಚುನಾವಣೆ ನಡೆಸಿದ್ದಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಅವರ ತಂಡವನ್ನು ಅಭಿನಂದಿಸುತ್ತಾ ಮೋದಿ ಹೇಳಿದರು.

ಪುದುಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಳಂಬ ಮಾಡಿದ್ದಕ್ಕಾಗಿ ಕಾಂಗ್ರೆಸ್ಸನ್ನು ಹೆಸರಿಸದೆಯೇ ಪ್ರಧಾನಿ ತರಾಟೆಗೆ ತೆಗೆದುಕೊಂಡರು.

"ದೆಹಲಿಯಲ್ಲಿ ನನ್ನ ಮೇಲೆ ದಾಳಿ ನಡೆಸುವ ಜನರಿದ್ದಾರೆ, ಅವರು ನನಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಲು ಪ್ರಯತ್ನಿಸುತ್ತಾರೆ ಆದರೆ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸೂಚಿಸಿದ ಸುಪ್ರೀಂಕೋರ್ಟಿನ ೨೦೧೮ರ ತೀರ್ಪಿನ ಹೊರತಾಗಿಯೂ ಇದೇ ಜನರು ಇಲ್ಲಿಯವರೆಗೆ ಚುನಾವಣೆಗಳು ನಡೆಯದಂತೆ ತಡೆದಿದ್ದಾರೆ. ಅವರು ಪ್ರಜಾಪ್ರಭುತ್ವವನ್ನು ನಂಬುವುದಿಲ್ಲ ಎಂದು ಮೋದಿ ಆರೋಪಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಮೂರು ಮಂತ್ರಗಳಾದಇನ್ಸಾನಿಯತ್, ಜಮ್ಹೂರಿಯಾತ್ ಮತ್ತು ಕಾಶ್ಮೀರಿಯತ್ ಆಧರಿಸಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್‍ಯಗಳು ನಡೆಯುತ್ತಿವೆ ಎಂದು ಪ್ರಧಾನಿ ಎಂದು ಹೇಳಿದರು.

ಸುಮಾರು ೮೦೦ ಕ್ಷೇಮ ಕೇಂದ್ರಗಳ ಅಭಿವೃದ್ಧಿ, ಲಕ್ಷಕ್ಕೂ ಹೆಚ್ಚು ಜನರಿಗೆ ಆರೋಗ್ಯ ವಿಮಾ ಯೋಜನೆಯ ಮೂಲಕ ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆಯ ಸವಲತ್ತು, ಕಣಿವೆಯ ಸೇಬು ಬೆಳೆಗಾರರಿಂದ ಸುಮಾರು ೧೨ ಲಕ್ಷ ಮೆಟ್ರಿಕ್ ಟನ್ ಸೇಬು ಖರೀದಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮೋದಿ ವಿವರಿಸಿದರು.

ಮುಂದಿನ ಎರಡು-ಮೂರು ವರ್ಷಗಳಲ್ಲಿ ಕೇಂದ್ರಾಡಳಿತ ಪ್ರದೇಶದ ರೈಲ್ವೆ ಜಾಲವನ್ನು ದೇಶದ ಉಳಿದ ಭಾಗಗಳ ಜೊತೆಗೆ ಸಂಪರ್ಕಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಅದೇ ಅವಧಿಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತಿ ಮನೆಗೆ ಕೊಳವೆ ನೀರನ್ನು ವಿಸ್ತರಿಸಲು ಆಡಳಿತವು ಪ್ರಯತ್ನಿಸುತ್ತಿದೆ ಎಂದೂ ಅವರು ಹೇಳಿದರು.

No comments:

Advertisement