Sunday, December 27, 2020

ರೈತರೊಂದಿಗೆ ಮುಕ್ತ ಚರ್ಚೆ: ಕೇಂದ್ರ ಸಚಿವರಿಗೆ ಕೇಜ್ರಿ ಸವಾಲು

 ರೈತರೊಂದಿಗೆ ಮುಕ್ತ ಚರ್ಚೆ: ಕೇಂದ್ರ ಸಚಿವರಿಗೆ ಕೇಜ್ರಿ ಸವಾಲು

ನವದೆಹಲಿ: ರೈತರೊಂದಿಗೆ ಯಾರೇ ಕೇಂದ್ರ ಸಚಿವರು ಮುಕ್ತ ಚರ್ಚೆ ನಡೆಸಲಿ ಎಂದು 2020 ಡಿಸೆಂಬರ್ 27ರ ಭಾನುವಾರ ಸವಾಲು ಹಾಕಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೊಸ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪುನಃ ಮನವಿ ಮಾಡಿದರು.

ಕಳೆದ ನವೆಂಬರಿನಿಂದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟಿಸುತ್ತಿರುವ ಸಿಂಗು ಗಡಿಗೆ ಎರಡನೇ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, ರೈತರು ತಮ್ಮ ಉಳಿವಿಗಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಿದರು.

"ಯಾವುದೇ ಕೇಂದ್ರ ಸಚಿವರು ರೈತರೊಂದಿಗೆ ಮುಕ್ತ ಚರ್ಚೆ ನಡೆಸಲು ನಾನು ಸವಾಲು ಹಾಕುತ್ತೇನೆ. ಅದರಿಂದ  ಕಾಯ್ದೆಗಳು ಎಷ್ಟು ಪ್ರಯೋಜನಕಾರಿ ಅಥವಾ ಹಾನಿಕಾರಕವೆಂದು ಸ್ಪಷ್ಟವಾಗುತ್ತದೆಎಂದು ಕೇಜ್ರಿವಾಲ್ ನುಡಿದರು.

ಡಿಸೆಂಬರ್ ರಂದು ದೆಹಲಿ-ಹರಿಯಾಣ ಗಡಿಯಲ್ಲಿ ಸಿಂಗುಗೆ ಮೊದಲ ಬಾರಿಗೆ ಭೇಟಿ ನೀಡಿದ್ದ ಕೇಜ್ರಿವಾಲ್ ಅವರೊಂದಿಗೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇದ್ದರು.

"ರೈತರು ತಮ್ಮ ಉಳಿವಿಗಾಗಿ ಪ್ರತಿಭಟಿಸುತ್ತಿದ್ದಾರೆ. ಕಾನೂನುಗಳು ಅವರ ಭೂಮಿಯನ್ನು ಕಸಿದುಕೊಳ್ಳುತ್ತವೆ. ದಯವಿಟ್ಟು ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಕೇಂದ್ರಕ್ಕೆ ಕೈ ಮುಗಿದು ಮನವಿ ಮಾಡುತ್ತೇನೆಎಂದು ಅವರು ಹೇಳಿದರು.

ಪ್ರತಿಭಟನಾ ನಿರತ ರೈತರಿಗೆ ಸಿಸೋಡಿಯಾ, "ನಾವು ಎಲ್ಲಾ ವ್ಯವಸ್ಥೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ನೀವು (ರೈತರು) ಅನುಭವಿಸುವ ನೋವು ಕನಿಷ್ಠ ಎಂದು ನಾವು ಖಚಿತಪಡಿಸುತ್ತಿದ್ದೇವೆಎಂದು ಹೇಳಿದರು. ಕೇಜ್ರಿವಾಲ್ ತಮ್ಮ ಮೊದಲ ಭೇಟಿಯ ಸಮಯದಲ್ಲಿ ದೆಹಲಿ ಸರ್ಕಾರವು ರೈತರಿಗಾಗಿ ಮಾಡಿದ ವ್ಯವಸ್ಥೆಗಳನ್ನು ಪರಿಶೀಲಿಸಿದ್ದರು.

ಕೇಜ್ರಿವಾಲ್ ಮತ್ತು ಅವರ ಪಕ್ಷವಾದ ಆಮ್ ಆದ್ಮಿ ಪಕ್ಷವು (ಎಎಪಿ) ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಪರವಾಗಿ ಬಲವಾಗಿ ನಿಂತಿದೆ. ಸಿಂಗು ಮಾತ್ರವಲ್ಲದೆ, ದೆಹಲಿಯ ಇತರ ಗಡಿ ಕೇಂದ್ರಗಳಲ್ಲಿ ಹೆಚ್ಚಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

No comments:

Advertisement