Friday, January 1, 2021

ಡಿಸೆಂಬರಿನಲ್ಲಿ ಜಿಎಸ್ಟಿ ೧.೧೫ ಲಕ್ಷ ಕೋಟಿ ರೂ.ಸಂಗ್ರಹ, ಸಾರ್ವಕಾಲಿಕ ದಾಖಲೆ

 ಡಿಸೆಂಬರಿನಲ್ಲಿ ಜಿಎಸ್ಟಿ ೧.೧೫ ಲಕ್ಷ ಕೋಟಿ ರೂ.ಸಂಗ್ರಹ, ಸಾರ್ವಕಾಲಿಕ ದಾಖಲೆ

ನವದೆಹಲಿ: ದೇಶದ ಆರ್ಥಿಕತೆಯ ಪುನರುಜ್ಜೀವನದ ಸೂಚಕವಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಡಿಸೆಂಬರ್ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ ಗರಿಷ್ಠ .೧೫ ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದೆ. ಡಿಸೆಂಬರ್ ತಿಂಗಳ ಜಿಎಸ್ಟಿ ಸಂಗ್ರಹವು ಸರಣಿ ಹಬ್ಬಗಳ ಬೇಡಿಕೆ ಹಿನ್ನೆಲೆಯಲ್ಲಿ ಹೆಚ್ಚಿದ್ದು, ಆರ್ಥಿಕತೆಯ ಪುನಃಶ್ಚೇತವನ್ನು ಪ್ರತಿಬಿಂಬಿಸುತ್ತದೆ ಎಂದು ಹಣಕಾಸು ಸಚಿವಾಲಯ 2021ರ ಜನವರಿ 01ರ ಶುಕ್ರವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿತು.

೨೦೨೦ ಡಿಸೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ ,೧೫,೧೭೪ ಕೋಟಿ ರೂಪಾಯಿಗಳಾಗಿದ್ದು, ಇದು ೨೦೧೭ರ ಜುಲೈ ೧ರಂದು ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸಿದ ನಂತರದ ಗರಿಷ್ಠ ಮೊತ್ತವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿತು.

"ಇದು ಕಳೆದ ೨೧ ತಿಂಗಳುಗಳಿಂದ ಮಾಸಿಕ ಆದಾಯದಲ್ಲಿ ಅತ್ಯಧಿಕ ಬೆಳವಣಿಗೆಯಾಗಿದೆ. ಇದು ಸಾಂಕ್ರಾಮಿಕ ನಂತರದ ತ್ವರಿತ ಆರ್ಥಿಕ ಚೇತರಿಕೆ ಮತ್ತು ಜಿಎಸ್ಟಿ ತಪ್ಪಿಸಿಕೊಳ್ಳುವವರ ವಿರುದ್ಧದ ರಾಷ್ಟ್ರವ್ಯಾಪಿ ಅಭಿಯಾನದ ಪರಿಣಾಮವಾಗಿದೆ. ಇತ್ತೀಚೆಗೆ ಪರಿಚಯಿಸಲಾದ ಅನೇಕ ವ್ಯವಸ್ಥಿತ ಬದಲಾವಣೆಗಳು ಕೂಡಾ ಸುಧಾರಿತ ಅನುಸರಣೆಗೆ ಕಾರಣವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

೨೦೨೦ ಡಿಸೆಂಬರ್ ೩೧ ರವರೆಗೆ ನವೆಂಬರ್ ತಿಂಗಳಿಗಾಗಿ ಸಲ್ಲಿಸಲಾದ ಒಟ್ಟು ಜಿಎಸ್ಟಿಆರ್ - ಬಿ ರಿಟರ್ನ್ಸ್ ಸಂಖ್ಯೆ ೮೭ ಲಕ್ಷ ಎಂದು ಪ್ರಕಟಣೆ ಹೇಳಿದೆ.

ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇಕಡಾ ೨೭ ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷ ಇದೇ ತಿಂಗಳಲ್ಲಿ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡಾ ೮ರಷ್ಟು ಹೆಚ್ಚಾಗಿದೆ.

ಜಿಎಸ್ಟಿ ಆದಾಯದಲ್ಲಿ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, ಡಿಸೆಂಬರಿನಲ್ಲಿ ಸಂಗ್ರಹ ಮೊತ್ತ ಸತತ ಮೂರನೇ ತಿಂಗಳು ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಮತ್ತು ೨೦೧೯ ಡಿಸೆಂಬರ್ನಲ್ಲಿ ಸಂಗ್ರಹಿಸಿದ .೦೩ ಲಕ್ಷ ಕೋಟಿ ರೂ.ಗಳಿಗಿಂತ ಶೇಕಡಾ ೧೨ರಷ್ಟು ಹೆಚ್ಚಾಗಿದೆ.

ಡಿಸೆಂಬರಿನಲ್ಲಿ ಕೇಂದ್ರ ಜಿಎಸ್ಟಿ ಸಂಗ್ರಹ ೨೧,೩೬೫ ಕೋಟಿ ರೂ., ರಾಜ್ಯ ಜಿಎಸ್ಟಿ ೨೭,೮೦೪ ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್ಟಿ ೫೭,೪೨೬ ಕೋಟಿ ರೂ. (ಸರಕುಗಳ ಆಮದಿಗೆ ಸಂಗ್ರಹಿಸಿದ ೨೭,೦೫೦ ಕೋಟಿ ರೂ. ಸೇರಿದಂತೆ) ಮತ್ತು ಸೆಸ್ ,೫೭೯ ಕೋಟಿ ರೂ. (ಸರಕುಗಳ ಆಮದು ಮೇಲೆ ಸಂಗ್ರಹಿಸಿದ ೯೭೧ ಕೋಟಿ ರೂ.) ಎಂದು ಹೇಳಿಕೆ ತಿಳಿಸಿದೆ.

ನಿಯಮಿತ ಇತ್ಯರ್ಥವಾಗಿ ಸರ್ಕಾರ ೨೩,೨೭೬ ಕೋಟಿ ರೂ.ಗಳನ್ನು ಸಿಜಿಎಸ್ಟಿಗೆ ಮತ್ತು ಎಸ್ಜಿಎಸ್ಟಿಗೆ ೧೭,೬೮೧ ಕೋಟಿ ರೂ. ಡಿಸೆಂಬರ್ ತಿಂಗಳಲ್ಲಿ ನಿಯಮಿತವಾಗಿ ಇತ್ಯರ್ಥಪಡಿಸಿದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಸಿಜಿಎಸ್ಟಿಗೆ ೪೪,೬೪೧ ಕೋಟಿ ರೂ. ಮತ್ತು ಎಸ್ಜಿಎಸ್ಟಿಗೆ ೪೫,೪೮೫ ಕೋಟಿ ರೂಪಾಯಿ ಎಂದು ಪ್ರಕಟಣೆ ಹೇಳಿದೆ.

No comments:

Advertisement