Friday, January 1, 2021

ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ತುರ್ತು ಬಳಕೆಗೆ ಭಾರತ ಒಪ್ಪಿಗೆ

 ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ತುರ್ತು ಬಳಕೆಗೆ ಭಾರತ ಒಪ್ಪಿಗೆ

ನವದೆಹಲಿ: ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ತುರ್ತು ಬಳಕೆಯ ಅಧಿಕಾರವನ್ನು ನೀಡಲು ಸರ್ಕಾರ ನೇಮಿಸಿದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿಯು (ಎಸ್ಇಸಿ)  2021ರ ಜನವರಿ 01ರ ಶುಕ್ರವಾರ ಶಿಫಾರಸು ಮಾಡಿದ್ದು ಕೋವಿಡ್ ೧೯ ವಿರುದ್ಧ ಲಸಿಕೆ ಪರವಾನಗಿ ನೀಡುವ ನಿಟ್ಟಿನಲ್ಲಿ ಭಾರತ ಅತ್ಯಂತ ಸಮೀಪದಲ್ಲಿದೆ.

ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ -ಸಿಡಿಎಸ್ಕೊ) ವಿಷಯ ತಜ್ಞರ ಸಮಿತಿಯ ಅನುಮೋದನೆಯು ಮುಂದಿನ ಕೆಲವು ದಿನಗಳಲ್ಲಿ ಲಸಿಕೆಯೊಂದಿಗೆ ಸಾಮೂಹಿಕ ರೋಗನಿರೋಧಕ ಅಭಿಯಾನ ಪ್ರಾರಂಭಿಸಲು ದಾರಿ ಮಾಡಿಕೊಡುತ್ತದೆ.

ಅಸ್ಟ್ರಾಜೆನೆಕಾ ಲಸಿಕೆಯ ಕೋಟಿಗೂ ಹೆಚ್ಚು ಪ್ರಮಾಣವನ್ನು ಈಗಾಗಲೇ ಅದರ ಸ್ಥಳೀಯ ಉತ್ಪಾದಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಂಗ್ರಹಿಸಿದೆ ಮತ್ತು ಶನಿವಾರದಂದು ಶೈತ್ಯಾಗಾರದಿಂದ ಎಲ್ಲ ರಾಜ್ಯಗಳಿಗೆ ಅದನ್ನು ಸಾಗಿಸಲು ಪ್ರಾರಂಭಿಸಬಹುದು ಎಂದು ಸುದ್ದಿ ಮೂಲಗಳು ತಿಳಿಸಿವೆ. ಶನಿವಾರದ ದಿನವೇ ಚುಚ್ಚುಮದ್ದು ಅಭಿಯಾನ (ವ್ಯಾಕ್ಸಿನೇಷನ್) ಕಾರ್ಯಕ್ರಮದ ವ್ಯಾಪಕ ಡ್ರೈ ರನ್ ಕೂಡಾ ನಡೆಯಲಿದೆ.

ಅಮೆರಿಕದ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಕೋವಿಡ್-೧೯ ಸೋಂಕನ್ನು ಹೊಂದಿರುವ ಭಾರತ, ಮುಂದಿನ ಆರರಿಂದ ಎಂಟು ತಿಂಗಳಲ್ಲಿ ೩೦ ಕೋಟಿ ಜನರಿಗೆ ಚುಚ್ಚುಮದ್ದು ನೀಡಲು ಯೋಜಿಸಿದೆ. ಕೈಗೆಟುಕುವ ಆಕ್ಸ್ಫರ್ಡ್ ಲಸಿಕೆ ಅದರ ದೊಡ್ಡ ಭರವಸೆಯಾಗಿದೆ.

ಸೀರಮ್ ಇನ್ಸ್ಟಿಟ್ಯೂಟ್ನೊಂದಿಗೆ ಭಾರತ ಸರ್ಕಾರ ಇನ್ನೂ ಖರೀದಿ ಒಪ್ಪಂದಕ್ಕೆ ಸಹಿ ಹಾಕಿಲ್ಲವಾದರೂ, ಮೊದಲು ತನ್ನ ಗೃಹ ಮಾರುಕಟ್ಟೆಯತ್ತ ಗಮನ ಹರಿಸುವುದಾಗಿ ಕಂಪೆನಿ ಹೇಳಿದೆ. ದೇಶೀಯ ಮಾರುಕಟ್ಟೆಯ ಬಳಿಕವೇ ತಾನು ರಫ್ತು ಕಡೆಗೆ ಗಮನ ಹರಿಸುವುದಾಗಿ ಅದು ಹೇಳಿದೆ.

"ಭಾರತ ಸರ್ಕಾರಕ್ಕೆ, ಕೋವಿಶೀಲ್ಡ್ (ಆಕ್ಸ್ಫರ್ಡ್ ಲಸಿಕೆ) ಪ್ರತಿ ಡೋಸ್ಗೆ ಸುಮಾರು ಡಾಲರ್ ವೆಚ್ಚವಾಗಲಿದೆ, ಆದ್ದರಿಂದ ಪ್ರತಿ ವ್ಯಕ್ತಿಗೆ ಡಾಲರ್ [೪೪೦ ರೂ.], ಆದರೆ ಖಾಸಗಿ ಮಾರುಕಟ್ಟೆಗೆ ೭೦೦-೮೦೦ ರೂ.ಆಗುತ್ತದೆ ಎಂದು ಸಂಸ್ಥೆಯ ಸಿಇಒ ಆದರ್ ಪೂನಾವಲ್ಲಾ ಶುಕ್ರವಾರ ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಪುಣೆ ಮೂಲದ ಸೀರಮ್ ಸಂಸ್ಥೆ ಸಲ್ಲಿಸಿದ ಡೇಟಾವನ್ನು ತಜ್ಞರ ಸಮಿತಿ ಪರಿಶೀಲಿಸಿದ ನಂತರ ಲಸಿಕೆಗೆ ತುರ್ತು ಅನುಮೋದನೆ ನೀಡಲಾಯಿತು. ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ಈಗಾಗಲೇ ಆಕ್ಸ್ಫರ್ಡ್ ಲಸಿಕೆಗೆ ಅನುಮೋದನೆ ನೀಡಿವೆ.

ಮಧ್ಯಂತರ ಮಾಹಿತಿಯ ಪ್ರಕಾರ, ರೋಗಲಕ್ಷಣದ ಸೋಂಕನ್ನು ತಡೆಗಟ್ಟುವಲ್ಲಿ ಅಸ್ಟ್ರಾಜೆನೆಕಾ / ಆಕ್ಸ್ಫರ್ಡ್ ಲಸಿಕೆಯ ಪರಿಣಾಮಕಾರಿತ್ವವು ಶೇಕಡಾ ೭೦. ರಷ್ಟಿದ್ದು, ಪ್ಲೇಸಿಬೊ ಪಡೆದ ,೮೨೯ ಜನರಲ್ಲಿ ೧೦೧ ಜನರಿಗೆ ಹೋಲಿಸಿದರೆ ಎರಡು-ಡೋಸ್ ಆಕ್ಸ್ಫರ್ಡ್ ಲಸಿಕೆ ಪಡೆದ ,೮೦೭ ಜನರಲ್ಲಿ ೩೦ ಜನರಲ್ಲಿ ಮಾತ್ರ ಕೋವಿಡ್-೧೯ ಕಂಡು ಬಂದಿದೆ.

ಫಿಜರ್ / ಬಯೋಎನ್ಟೆಕ್ ಮತ್ತು ಮಾಡರ್ನಾದ ಎರಡು ಡೋಸ್ ಲಸಿಕೆಗಳ ಶೇಕಡಾ ೯೫ ಮತ್ತು ೯೪. ರಷ್ಟು ಪರಿಣಾಮಕಾರಿತ್ವದೊಂದಿಗೆ ಹೋಲಿಸಿದರೆ, ಅಸ್ಟ್ರಾಜೆನೆಕಾ ಲಸಿಕೆಯ ಪರಿಣಾಮಕಾರಿತ್ವ ಸ್ವಲ್ಪ ಕಡಿಮೆಯೇ.

ಆದಾಗ್ಯೂ, ಅಸ್ಟ್ರಾಜೆನೆಕಾ ಲಸಿಕೆ ಭಾರತದ ಸಾಮೂಹಿಕ ವ್ಯಾಕ್ಸಿನೇಷನ್ ಯೋಜನೆಗಳಿಗೆ ಹೆಚ್ಚು ಉಪಯುಕ್ತವಾದುದು. ಏಕೆಂದರೆ ಇದನ್ನು ಗಾಢವಾಗಿ ಘನೀಕರಿಸುವ ಅಗತ್ಯವಿಲ್ಲ ಮತ್ತು ಇದನ್ನು ಆರು ತಿಂಗಳ ಕಾಲ ಸಾಮಾನ್ಯ ಉಷ್ಣತೆಯ ಪ್ರಮಾಣಿತ ರೆಫ್ರಿಜರೇಟರ್ನಲ್ಲಿ ಇಡಬಹುದು. ತಯಾರಿಕೆ ದೃಷ್ಟಿಯಿಂದಲೂ ಇದು ಅಗ್ಗವಾಗಿದೆ. ಹೀಗಾಗಿ ಇದು ಅಭಿವೃದ್ಧಿಶೀಲ ರಾಷ್ಟ್ರUಳಲ್ಲಿ ಹೆಚ್ಚಿನ ಭರವಸೆ ಮೂಡಿಸುತ್ತದೆ.

ಎಸ್ಐಐನ ಅರ್ಜಿಯ ನಂತರ, ಕೋವಿಡ್ -೧೯ ಲಸಿಕೆ ಕೋವಾಕ್ಸಿನ್ಗಾಗಿ ಭಾರತ್ ಬಯೋಟೆಕ್ ತುರ್ತು ಬಳಕೆಯ ಅರ್ಜಿಯನ್ನು ಪರಿಶೀಲಿಸಲು ಎಸ್ಇಸಿ ಪ್ರಾರಂಭಿಸಿದೆ ಆದರೆ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಎಸ್ಐಐ ಡಿಸೆಂಬರ್ ರಂದು ಆಕ್ಸ್ಫರ್ಡ್ ಕೋವಿಡ್ -೧೯ ಲಸಿಕೆಗಾಗಿ ಇಯುಎಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಅರ್ಜಿ ಸಲ್ಲಿಸಿದ್ದರೆ, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಡಿಸೆಂಬರ್ ರಂದು ತನ್ನ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ಗೆ ಅನುಮತಿ ಕೋರಿತ್ತು.

No comments:

Advertisement