Friday, September 30, 2022

ಇಂದಿನ ಇತಿಹಾಸ History Today ಸೆಪ್ಟೆಂಬರ್‌ 30

 ಇಂದಿನ ಇತಿಹಾಸ History Today ಸೆಪ್ಟೆಂಬರ್‌ 30

2022: ನವದೆಹಲಿ:  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2020 ರ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಸೇರಿದಂತೆ 68ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ವಿಜೇತರಿಗೆ ಪ್ರದಾನ ಮಾಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು 2020 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನಟಿ ಆಶಾ ಪರೇಖ್ ಅವರಿಗೆ ನೀಡಿದರು. ನಟಿ ಮತ್ತು ನಿರ್ಮಾಪಕಿ ಜ್ಯೋತಿಕಾ ಅವರು ಸೂರರೈ ಪೊಟ್ರು ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದರು. ಚಿತ್ರದ ತಾರೆಯರಾದ ಸೂರ್ಯ ಮತ್ತು ಅಪರ್ಣಾ ಬಾಲಮುರಳಿ ಕ್ರಮವಾಗಿ ಅತ್ಯುತ್ತಮ ನಟ ಪುರುಷ ಮತ್ತು ಮಹಿಳಾ ಪ್ರಶಸ್ತಿಗಳನ್ನು ಪಡೆದರು. ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್‌ಗಾಗಿ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಜಯ್ ದೇವಗನ್ ಅವರೊಂದಿಗೆ ಹಂಚಿಕೊಂಡರು. ಚಲನಚಿತ್ರವು ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು,

2022: ನವದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ನಿರ್ಮಾಣ ಹಂತದಲ್ಲಿರುವ ಹೊಸ ಸಂಸತ್ತಿನ ಕಟ್ಟಡದ ಮೇಲೆ ಸ್ಥಾಪಿಸಲಾದ ಸಿಂಹದ ಪ್ರತಿಮೆಯು ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯಿದೆಯನ್ನು (2005) ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ 2022 ಸೆಪ್ಟೆಂಬರ್‌ 30ರ ಶುಕ್ರವಾರ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠವು, 2005ರ ರಾಷ್ಟ್ರ ಲಾಂಛನ (ಅಸಮರ್ಪಕ ಬಳಕೆ ನಿಷೇಧ) ಕಾಯ್ದೆ, 2005 ರ ಅಡಿಯಲ್ಲಿ ಅನುಮೋದಿಸಲಾದ ರಾಷ್ಟ್ರೀಯ ಲಾಂಛನದ ವಿನ್ಯಾಸಕ್ಕೆ ಹೊಸ ಶಿಲ್ಪವು ವಿರುದ್ಧವಾಗಿದೆ ಎಂದು ಆರೋಪಿಸಿ ಇಬ್ಬರು ವಕೀಲರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿರಿ)

2022: ಗಾಂಧಿನಗರ: ಒಲಿಂ‍ಪಿಕ್‌ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರು 2022 ಸೆಪ್ಟೆಂಬರ್‌ 30ರ ಶುಕ್ರವಾರ ರಾಷ್ಟ್ರೀಯ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ನ ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು. ಮಣಿಪುರ ತಂಡವನ್ನು ಪ್ರತಿನಿಧಿಸಿದ ಚಾನು, ಸ್ಪರ್ಧೆಯಲ್ಲಿ ಒಟ್ಟು 191 ಕೆ.ಜಿ. ಭಾರ ಎತ್ತುವಲ್ಲಿ ಯಶಸ್ವಿಯಾದರು. ಸ್ನ್ಯಾಚ್‌ನಲ್ಲಿ 84 ಕೆ.ಜಿ ಹಾಗೂ ಕ್ಲೀನ್‌– ಜರ್ಕ್‌ನಲ್ಲಿ 107 ಕೆ.ಜಿ. ಸಾಧನೆ ಮಾಡಿದರು. 187 ಕೆ.ಜಿ. ಭಾರ ಎತ್ತಿದ ಮಣಿಪುರದವರೇ ಆದ ಸಂಜಿತಾ ಚಾನು ಬೆಳ್ಳಿ ಗೆದ್ದರು. ಅವರು ಸ್ನ್ಯಾಚ್‌ನಲ್ಲಿ 82 ಕೆ.ಜಿ ಹಾಗೂ ಕ್ಲೀನ್‌–ಜರ್ಕ್‌ನಲ್ಲಿ 105 ಕೆ.ಜಿ ಭಾರ ಎತ್ತಿದರು. ಒಡಿಶಾದ ಸ್ನೇಹಾ ಸೊರೇನ್‌ (169 ಕೆ.ಜಿ) ಅವರು ಕಂಚು ಪಡೆದರು. ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಗೆದ್ದಿದ್ದ ಮೀರಾಬಾಯಿ ಅವರಿಗೆ ಇದು ಎರಡನೇ ರಾಷ್ಟ್ರೀಯ ಕೂಟ. ಅವರು ಎರಡೂ ವಿಭಾಗಗಳಲ್ಲಿ ಮೊದಲ ಎರಡು ಪ್ರಯತ್ನಗಳಲ್ಲಿ ಮಾತ್ರ ಭಾರ ಎತ್ತಿದರು. ಮೂರನೇ ಅವಕಾಶದಲ್ಲಿ ಭಾರ ಎತ್ತಲಿಲ್ಲ. ಎಡಗೈನ ಮಣಿಕಟ್ಟಿನಲ್ಲಿ ಅಲ್ಪ ನೋವು ಇರುವುದರಿಂದ ಮೂರನೇ ಪ್ರಯತ್ನಕ್ಕೆ ಮುಂದಾಗಲಿಲ್ಲ ಎಂದು ಹೇಳಿದರು.

2022: ಭೋಪಾಲ್: ಮಧ್ಯಪ್ರದೇಶದ ಸ್ಥಳೀಯ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಜಯಭೇರಿ ಬಾರಿಸಿತು. 814 ಕ್ಷೇತ್ರಗಳ ಪೈಕಿ 417ರಲ್ಲಿ ಗೆಲುವು ಸಾಧಿಸಿತು. 46 ಸ್ಥಳೀಯ ಸಂಸ್ಥೆಗಳ ಪೈಕಿ 38ರಲ್ಲಿ ಬಿಜೆಪಿ ಬಹುಮತ ಪಡೆಯಿತು.ಸೆಪ್ಟೆಂಬರ್‌ 27ರ  ಮಂಗಳವಾರ ಚುನಾವಣೆ ನಡೆದಿತ್ತು. ಉಳಿದಂತೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 250, ಸ್ವತಂತ್ರ ಅಭ್ಯರ್ಥಿಗಳು 131, ಆಮ್ ಆದ್ಮಿ 7, ಜಿಜಿಪಿ 6 ಮತ್ತು ಬಿಎಸ್‌ಪಿ ಪಕ್ಷ 3 ಕ್ಷೇತ್ರಗಳನ್ನು ಗೆದ್ದುಕೊಂಡವು. 18 ಜಿಲ್ಲೆಗಳಲ್ಲಿ ನಡೆದ ಚುನಾವಣೆಯಲ್ಲಿ ಶೇಕಡ 72.60ರಷ್ಟು ಮತದಾನ ನಡೆದಿತ್ತು. 25 ಕಾರ್ಪೊರೇಟರ್‌ಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. 17 ನಗರ ಪಾಲಿಕೆ ಮತ್ತು 29 ನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ 3,397 ಅಭ್ಯರ್ಥಿಗಳು ಕಣದಲ್ಲಿದ್ದರು.

2020: ಲಕ್ನೋ: ೨೮ ವರ್ಷಗಳ ಹಿಂದೆ ಸಂಭವಿಸಿದ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ಸೆಪ್ಟೆಂಬರ್ 30ರ ಬುಧವಾರ ,೦೦೦ ಪುಟಗಳ ಚಾರಿತ್ರಿಕ ತೀರ್ಪು ನೀಡಿದ ವಿಶೇಷ ಸಿಬಿಐ ನ್ಯಾಯಾಲಯವು ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿಮುರಳಿ ಮನೋಹರ ಜೋಶಿಉಮಾಭಾರತಿ ಸೇರಿದಂತೆ ಎಲ್ಲ ೩೨ ಮಂದಿ ಆರೋಪಿಗಳನ್ನು ಖುಲಾಸೆ ಮಾಡಿತುತೀರ್ಪನ್ನು ಓದಿ ಹೇಳಿದರ ವಿಶೇಷ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ’೧೯೯೨  ಬಾಬರಿ ಮಸೀದಿ ನೆಲಸಮವು ಪೂರ್ವ ಯೋಜಿತವಲ್ಲ ಮತ್ತು ಸಾಕ್ಷ್ಯಗಳು ಬಲವಾಗಿಲ್ಲ’ ಎಂದು ಹೇಳಿ ಎಲ್ಲ ಆರೋಪಿಗಳನ್ನೂ ದೋಷಮುಕ್ತಗೊಳಿಸಿದರು.ತೀರ್ಪನ್ನು ಓದಿ ಹೇಳುವ ವೇಳೆಯಲ್ಲಿ ಸಾಧ್ವಿ ಋತಂಭರಸಾಕ್ಷಿ ಮಹಾರಾಜ್ವಿನಯ್ ಕಟಿಯಾರ್ ಮತ್ತು ಚಂಪತ್ ರಾಯ್ ಬನ್ಸಾಲ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರೆಲಾಲ್ ಕೃಷ್ಣ ಅಡ್ವಾಣಿಮುರಳಿ ಮನೋಹರ ಜೋಷಿಮತ್ತು ಉಮಾಭಾರತಿ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಹಾಜರಾಗಿದ್ದರುಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರು ವಯಸ್ಸು ಸಂಬಂಧಿಸಿದ ಅನಾರೋಗ್ಯದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲಿಲ್ಲಉಮಾಭಾರತಿ ಅವರು ಕೊರೋನಾವೈರಸ್ ಸೋಂಕಿನ ಕಾರಣ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ನ್ಯಾಯಾಲಯದ ಕಲಾಪ ವೀಕ್ಷಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಬಾಬರಿ ಮಸೀದಿ ಧ್ವಂಶ ಪ್ರಕರಣದ ಎಲ್ಲ ೩೨ ಆರೋಪಿಗಳನ್ನು ನಿರ್ಣಾಯಕ ಪುರಾವೆಗಳ ಕೊರತೆಯ ಕಾರಣ ಖುಲಾಸೆಗೊಳಿಸಿದ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪನ್ನು  ಬಿಜೆಪಿ, ವಿಶ್ವ ಹಿಂದೂ ಪರಿಷತ್, ಶಿವಸೇನೆ ಸೇರಿದಂತೆ ಹಲವಾರು ನಾಯಕರು 2020 ಸೆಪ್ಟೆಂಬರ್ 30ರ ಬುಧವಾರ ಸ್ವಾಗತಿಸಿದರು. ತೀರ್ಪು ಹೊರಬಿದ್ದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಸತ್ಯಮೇವ ಜಯತೆ’ ಎಂದು ಹೇಳಿಕೆ ನೀಡಿದರುಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ, "ತಡವಾಗಿಯಾದರೂ ಅಂತಿಮವಾಗಿ ನ್ಯಾಯಕ್ಕೆ ಜಯ ಲಭಿಸಿರುವುದನ್ನು ಇದು ತೋರಿಸಿದೆ’ ಎಂದು ಹೇಳಿದರುವಿಶೇಷ ಸಿಬಿಐ ನ್ಯಾಯಾಲಯದಿಂದ ಖುಲಾಸೆಗೊಂಡ ಆರೋಪಿಗಳಲ್ಲಿ ಒಬ್ಬರಾದ ಭಾರತೀಯ ಜನತಾ ಪಕ್ಷದ (ಬಿಜೆಪಿಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ತೀರ್ಪನ್ನು ಸ್ವಾಗತಿಸಿ, ’ಬಾಬರಿ ಮಸೀದಿ ಉರುಳಿಸುವಿಕೆಯ ಪ್ರಕರಣದ ವಿಶೇಷ ನ್ಯಾಯಾಲಯದ ತೀರ್ಪನ್ನು ನಾನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇನೆ ತೀರ್ಪು ರಾಮ ಜನ್ಮಭೂಮಿ ಚಳವಳಿಯ ಬಗ್ಗೆ ನನ್ನ ವೈಯಕ್ತಿಕ ಮತ್ತು ಬಿಜೆಪಿಯ ನಂಬಿಕೆ ಮತ್ತು ಬದ್ಧತೆಯನ್ನು ಸಮರ್ಥಿಸುತ್ತದೆ’ ಎಂದು ಹೇಳಿದರುಖುಲಾಸೆಗೊಂಡ ಆರೋಪಿಗಳಲ್ಲಿ ಒಬ್ಬರಾದ ಭಾರತೀಯ ಜನತಾ ಪಕ್ಷದ (ಬಿಜೆಪಿನಾಯಕ ವಿನಯ್ ಕಟಿಯಾರ್, ‘ನಾವು ತೀರ್ಪನ್ನು ಸ್ವಾಗತಿಸುತ್ತೇವೆಇದು ಸತ್ಯದ ವಿಜಯಧ್ವಂಸದಲ್ಲಿ ನಮ್ಮ ಯಾವ ಪಾತ್ರವೂ ಇರಲಿಲ್ಲನಾವು ನಿಜವಾಗಿಯೂ ವೇದಿಕೆಯಲ್ಲಿದ್ದೆವುಅದು ನೆಲಸಮ ಸ್ಥಳದಿಂದ ದೂರ ಇತ್ತು’ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020:  ಮುಂಬೈಶಿವಸೇನೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರವು ವಿವಾದಾತ್ಮಕ ಕೃಷಿ ಸುಗ್ರೀವಾಜ್ಞೆಗಳ ಅನುಷ್ಠಾನಕ್ಕಾಗಿ ಆಗಸ್ಟ್ ತಿಂಗಳಲ್ಲಿ ಹೊರಡಿಸಿದ ಅಧಿಸೂಚನೆಯನ್ನು 2020 ಸೆಪ್ಟೆಂಬರ್ 30ರ ಬುಧವಾರ ರದ್ದುಪಡಿಸಿತುಸಂಸತ್ತಿನಲ್ಲಿ ಮೂರು ಕಾಯ್ದೆಗಳನ್ನು ಅಂಗೀಕರಿಸುವ ಮೂಲಕ ಕೇಂದ್ರ ಸರ್ಕಾರವು  ಸುಗ್ರೀವಾಜ್ಞೆಗಳನ್ನು ಕಾಯ್ದೆಗಳಾಗಿ ಪರಿವರ್ತಿಸಿದೆವಿವಾದಾತ್ಮಕ ಕೃಷಿ ಸುಧಾರಣಾ ಸುಗ್ರೀವಾಜ್ಞೆ ರದ್ದು ಪಡಿಸದಿದ್ದರೆ ರಾಜ್ಯದ ಸಚಿವ ಸಂಪುಟ ಸಭೆಯನ್ನು ಬಹಿಷ್ಕರಿಸುವುದಾಗಿ ಒಕ್ಕೂಟದ ಪ್ರಮುಖ ಅಂಗಪಕ್ಷವಾಗಿರುವ ಕಾಂಗ್ರೆಸ್ ಬೆದರಿಕೆ ಹಾಕಿದ ನಂತರ  ಕ್ರಮ ಕೈಗೊಳ್ಳಲಾಯಿತುಆಗಸ್ಟ್ ೧೦  ಅಧಿಸೂಚನೆಯು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ನಿಯಂತ್ರಿಸುವ ಸ್ಥಳೀಯ ಅಧಿಕಾರಿಗಳಿಗೆ ಜೂನ್ನಲ್ಲಿ ಹೊರಡಿಸಲಾದ ಮೂರು ಕೇಂದ್ರ ಕೃಷಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತರಲು ನಿರ್ದೇಶಿಸಿತ್ತುಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿಪ್ರತಿನಿಧಿಗಳು ಸಚಿವ ಸಂಪುಟ ಸಭೆಯಲ್ಲಿ ಹೊಸದಾಗಿ ಜಾರಿಗೆ ಬಂದ ಕೃಷಿ ಕಾನೂನುಗಳ ಅನುಷ್ಠಾನದ ವಿಷಯವನ್ನು ಎತ್ತುವ ಸಾಧ್ಯತೆ ಇತ್ತುಎರಡು ಪಕ್ಷಗಳು ಕಾನೂನುಗಳನ್ನು "ರೈತ ವಿರೋಧಿ’ ಎಂಬುದಾಗಿ ಬಣ್ಣಿಸಿ ರಾಜ್ಯದಲ್ಲಿ ಅವುಗಳ ಅನುಷ್ಠಾನವನ್ನು ವಿರೋಧಿಸಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಅಕ್ಟೋಬರ್ ೪ಕ್ಕೆ ನಿಗದಿಯಾಗಿರುವ ಕೇಂದ್ರ ನಾಗರಿಕ ಸೇವೆಗಳ (ಯುಪಿಎಸ್ಸಿಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ 2020 ಸೆಪ್ಟೆಂಬರ್ 30ರ ಬುಧವಾರ ನಿರಾಕರಿಸಿತು. ಕೊರೊನಾ ಸೋಂಕಿನ ಕಾರಣ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೆಶನ ನೀಡಿತು. ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್ಸಿನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಳ ಸಿದ್ಧತೆಗೆ ೫೦ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಯುಪಿಎಸ್ ಸಿ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತುಕೋವಿಡ್-೧೯ ಕಾರಣದಿಂದಾಗಿ  ಬಾರಿಯ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ನಾಗರಿಕ ಸೇವೆಗಳ ಆಕಾಂಕ್ಷಿಗಳಲ್ಲಿ ಕೆಲವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಗೃಹ ವ್ಯವಹಾರಗಳ ಸಚಿವಾಲಯವು ಅಕ್ಟೋಬರ್ ೧ರಿಂದ ಜಾರಿಗೆ ಬರಲಿರುವ ಅನ್ಲಾಕ್  ಬಗ್ಗೆ ವಿವರವಾದ ಮಾರ್ಗಸೂಚಿಯನ್ನು 2020 ಸೆಪ್ಟೆಂಬರ್ 30ರ ಬುಧವಾರ ಪ್ರಕಟಿಸಿತುಅನ್ಲಾಕ್ . ಪ್ರಕ್ರಿಯೆಯಲ್ಲಿ ಮಲ್ಟಿಪ್ಲೆಕ್ಸ್ಈಜುಕೊಳಶಾಲೆಕಾಲೇಜುಗಳ ಚಟುವಟಿಕೆಗಳನ್ನು ಅಕ್ಟೋಬರ್ ೧೫ರಿಂದ ಭಾಗಶಃ ಪುನಾರಂಭ ಮಾಡಲು ಅನುಮತಿ ನೀಡಲಾಯಿತು.  ದೇಶದಲ್ಲಿ ಕೋವಿಡ್ -೧೯ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಕೆಲವು ರಾಜ್ಯಗಳಲ್ಲಿನ ಸ್ಥಳೀಯ ಆಡಳಿತಗಳು ಸ್ವಯಂಪ್ರೇರಿತ ಕರ್ಫ್ಯೂಸ್ಥಳೀಯ ಲಾಕ್ಡೌನ್ ಇತ್ಯಾದಿಗಳನ್ನು ಹೆಚ್ಚು ಅವಲಂಬಿಸುತ್ತಿದ್ದರೂಹೆಚ್ಚಿನ ರಿಯಾಯ್ತಿ ಮತ್ತು ಕಡಿಮೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

No comments:

Advertisement