Tuesday, June 11, 2024

ಒಡಿಶಾ ಮುಖ್ಯಮಂತ್ರಿ: ಸೆಕ್ಯುರಿಟಿ ಗಾರ್ಡ್‌ ಪುತ್ರ ಮೋಹನ್ ಮಾಝಿ

 ಒಡಿಶಾ ಮುಖ್ಯಮಂತ್ರಿ: ಸೆಕ್ಯುರಿಟಿ ಗಾರ್ಡ್‌ ಪುತ್ರ ಮೋಹನ್ ಮಾಝಿ

ಭುವನೇಶ್ವರ: ಬಿಜೆಡಿ ನಾಯಕ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಆಡಳಿತದ ಬಳಿಕ, ಒಡಿಶಾದಲ್ಲಿ ಹೊಸ ನಾಯಕ ಆಡಳಿತದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದು, ಬಿಜೆಪಿ ಮುಖ್ಯಮಂತ್ರಿ ಹುದ್ದೆಗೆ ಬುಡಕಟ್ಟು ನಾಯಕ ಮೋಹನ್ ಚರಣ್‌ ಮಾಝಿ ಅವರನ್ನು ಆಯ್ಕೆ ಮಾಡಿದೆ. ಮಾಝಿ  2024 ಜೂನ್‌ 12ರ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮಾಜಿ ಅವರಿಗೆ ಸಂಬಂಧಿಸಿದಂತೆ ಕೆಲವು ವಿಶೇಷಗಳಿವೆ:

1. ಶ್ರೀ ಮಾಝಿ ಕಿಯೋಂಜಾರ್ ಜಿಲ್ಲೆಯ ರಾಯ್ಕಲಾ ಗ್ರಾಮದಲ್ಲಿ ಜನಿಸಿದರು. ಅವರು ಭದ್ರತಾ ಸಿಬ್ಬಂದಿಯ  (ಸೆಕ್ಯೂರಿಟಿ ಗಾರ್ಡ್‌) ಮಗ.

2. ಅವರು 1997 ಮತ್ತು 2000 ರ ನಡುವೆ ಗ್ರಾಮದ ಮುಖ್ಯಸ್ಥರಾಗಿದ್ದರು. 2000 ರಲ್ಲಿ ಕಿಯೋಂಜಾರ್‌ನಿಂದ ಶಾಸಕರಾಗಿ ಆಯ್ಕೆಯಾದರು. ಅದಕ್ಕೆ ಮುನ್ನ ಬಿಜೆಪಿಯ ಒಡಿಶಾ ಎಸ್‌ಟಿ (ಪರಿಶಿಷ್ಟ ಬುಡಕಟ್ಟುಗಳು) ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

3. ಅವರಿಗೆ 52 ವರ್ಷ. ಈ ವರ್ಷದ ವಿಧಾನಸಭಾ ಚುನಾವಣೆ ಸೇರಿದಂತೆ ನಾಲ್ಕು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರ ಮತಗಳ ಅಂತರ 11,577.  ಅವರು ಕಾನೂನು ಪದವೀಧರ.

4. ನಿಯೋಜಿತ ಮುಖ್ಯಮಂತ್ರಿ ಒಡಿಶಾದಲ್ಲಿ ಬುಡಕಟ್ಟುಗಳ ಪ್ರಬಲ ಧ್ವನಿಯಾಗಿದ್ದಾರೆ ಮತ್ತು ಸಂಘಟನಾ ಕೌಶಲ್ಯಕ್ಕಾಗಿ ಖ್ಯಾತರಾಗಿದ್ದಾರೆ. ಅವರು ಹೊರಹೋಗುವ ಒಡಿಶಾ ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿದ್ದರು.

5. ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಮಾಝಿ ಅವರ ಮೊದಲ ಪ್ರತಿಕ್ರಿಯೆ: “ ಸ್ವಾಮಿ ಜಗನ್ನಾಥನ ಆಶೀರ್ವಾದದಿಂದಾಗಿ, ಬಿಜೆಪಿ ಒಡಿಶಾದಲ್ಲಿ ಬಹುಮತವನ್ನು ಸಾಧಿಸಿದೆ ಮತ್ತು ರಾಜ್ಯದಲ್ಲಿ ಸರ್ಕಾರವನ್ನು ರಚಿಸಲಿದೆ. ಬದಲಾವಣೆಗಾಗಿ ಮತ ಚಲಾಯಿಸಿದ 4.5 ಕೋಟಿ ಒಡಿಯಾಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.

2024 ಜೂನ್‌ 11ರ ಮಂಗಳವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮತ್ತು ಕೇಂದ್ರ ಸಚಿವ ಭೂಪೇಂದರ್‌ ಯಾದವ್‌ ನೇತೃತ್ವದಲ್ಲಿ ನಡೆದ ಒಡಿಶಾ ಶಾಸಕಾಂಗ ಪಕ್ಷ ಸಭೆಯಲ್ಲಿ ಮೋಹನ್‌ ಚರಣ್‌ ಮಾಝಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಆರಿಸಲಾಯಿತು. ಮಾಜಿ ನೆರವಿಗೆ ಕೆವಿ ಸಿಂಗ್‌ ದೇವ್‌ ಮತ್ತು ಪ್ರವತಿ ಪರಿದಾ ಇವರಿಬ್ಬರು ಉಪ ಮುಖ್ಯಮಂತ್ರಿಗಳಾಗಿ ಇರಲಿದ್ದಾರೆ.

ಚಂದ್ರಬಾಬು ನಾಯ್ಡು ಅಧಿಕಾರ ಸ್ವೀಕಾರ ಬುಧವಾರ

ಆಂದ್ರ ಪ್ರದೇಶದ ಮುಖ್ಯಮಂತ್ರಿಯಾಗಿ ತೆಲುಗು ದೇಶಂ ಪಕ್ಷದ ನಾಯಕ ಚಂದ್ರ ಬಾಬು ನಾಯ್ಡು ಅವರು 2024 ಜೂನ್‌ 12ರ ಬುಧವಾರ  ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಚಂದ್ರ ಬಾಬು ನಾಯ್ಡು ನೇತೃತ್ವದಲ್ಲಿ ಎನ್‌ ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಇವುಗಳನ್ನೂ ಓದಿ:

ಪ್ರಧಾನಿ ಮೋದಿ 3.0 ಸರ್ಕಾರ: ಯಾರಿಗೆ ಏನು ಖಾತೆ?
ಮೂರನೇ ಅವಧಿ: ಪ್ರಧಾನಿ ಮೋದಿ ಮೊದಲ ಕೆಲಸ ಯಾವುದು?
ನರೇಂದ್ರ ದಾಮೋದರದಾಸ್‌ ಮೋದಿ 3.0 ಯುಗಾರಂಭ

ಮೋದಿ 3.0 ಯುಗ: 5 ವರ್ಷಗಳ ಕಾರ್ಯಸೂಚಿ ಸಿದ್ಧ
ಮೋದಿ 3.0 ಆಡಳಿತ ಆರಂಭ: ನೆರೆ ರಾಷ್ಟ್ರಗಳಿಂದ ಯಾರು ಬರ್ತಿದ್ದಾರೆ?
ದೆಹಲಿ ಹಾರಾಟ ನಿಷೇಧ ವಲಯ, ಜೂನ್‌ 9ಕ್ಕೆ ಮೋದಿ ಪ್ರಮಾಣ
ಮೋದಿಗೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಲಿಖಿತ ಬೆಂಬಲ
ಪ್ರಧಾನಿ ಮೋದಿ ರಾಜೀನಾಮೆ, ಶನಿವಾರ ಪ್ರಮಾಣ ವಚನ?
ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?
ಕನ್ಯಾಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು
ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎಸ್‌ಕೆಎಂ ಜಯಭೇರಿ

No comments:

Advertisement