Sunday, June 30, 2024

ಭಾರತೀಯ ಸೇನಾ ಇತಿಹಾಸದಲ್ಲೇ ಇದು ಪ್ರಥಮ

 ಭಾರತೀಯ ಸೇನಾ ಇತಿಹಾಸದಲ್ಲೇ ಇದು ಪ್ರಥಮ

ಸಹಪಾಠಿಗಳು ಎರಡು ಪಡೆಗಳಿಗೆ ಅಗ್ರಣಿಗಳು

ವದೆಹಲಿ: ಭಾರತೀಯ ಸೇನಾ ಇತಿಹಾಸದಲ್ಲೇ ಇದು ಪ್ರಥಮ. ಭಾರತದ ಮಿಲಿಟರಿ ಇತಿಹಾಸದಲ್ಲಿ ಮೊದಲ ಬಾರಿಗೆ ಸಹಪಾಠಿಗಳು ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರಾಗಿದ್ದಾರೆ.

ಭಾರತೀಯ ಸೇನಾ ಇತಿಹಾಸದಲ್ಲಿ ಸಹಪಾಠಿಗಳು ಭಾರತೀಯ ಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿರುವುದು ಇದೇ ಪ್ರಪ್ರಥಮವಾಗಿದೆ.

ಭಾರತೀಯ ಸೇನಾ ಪಡೆಯ ದಂಡನಾಯಕ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ 1970ರ ದಶಕದಲ್ಲಿ ಮಧ್ಯಪ್ರದೇಶದ ರೇವಾದಲ್ಲಿರುವ ಸೈನಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಒಟ್ಟಿಗೆ ಅಧ್ಯಯನ ಮಾಡಿದ್ದರು.

ಅವರು ಒಟ್ಟಿಗೆ ಓದುತ್ತಿದ್ದುದು 5ಎ ತರಗತಿಯಲ್ಲಿ.  ಅವರ ಕ್ರಮ ಸಂಖ್ಯೆಗಳು (ರೋಲ್ ನಂಬರ್) ಕ್ರಮವಾಗಿ 931 ಮತ್ತು 938 ಆಗಿದ್ದವು. ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ರಕ್ಷಣಾ ಸಚಿವಾಲಯದ ಅಧಿಕೃತ ವಕ್ತಾರ ಎ ಭರತ್ ಭೂಷಣ್ ಬಾಬು ಅವರು ಎಕ್ಸ್  (ಹಿಂದಿನ ಟ್ವಿಟರ್)‌ ಸಂದೇಶದಲ್ಲಿ  "ಭಾರತೀಯ ಮಿಲಿಟರಿ ಇತಿಹಾಸದಲ್ಲೇ ಮೊದಲ ಬಾರಿಗೆ, ನೌಕಾಪಡೆ ಮತ್ತು ಸೇನಾ ಮುಖ್ಯಸ್ಥರು ಒಂದೇ ಶಾಲೆಯಿಂದ ಬಂದವರಾಗಿದ್ದಾರೆ. ಇಬ್ಬರು ಅದ್ಭುತ ವಿದ್ಯಾರ್ಥಿಗಳನ್ನು ಪೋಷಿಸುವ ಈ ಅಪರೂಪದ ಗೌರವ. ಮಧ್ಯಪ್ರದೇಶದ ರೇವಾದ ಸೈನಿಕ ಶಾಲೆಗೆ ಲಭಿಸಿದೆ. ಅಧ್ಯಯನದ 50 ವರ್ಷಗಳ ನಂತರ ಈ ಸಹಪಾಠಿಗಳು ತಮ್ಮ ಪಡೆಗಳನ್ನು ಮುನ್ನಡೆಸುತ್ತಿದ್ದಾರೆ” ಎಂದು ಬರೆದಿದ್ದಾರೆ.”

• ಉಭಯ ಪಡೆಗಳ ಇಬ್ಬರೂ ಮುಖ್ಯಸ್ಥರು ರೇವಾದಲ್ಲಿರುವ ಸೈನಿಕ ಶಾಲೆಯಲ್ಲಿ ಒಟ್ಟಿಗೆ ಅಧ್ಯಯನ ಮಾಡಿದ್ದರು.

ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು 2024ರ ಮೇ 1 ರಂದು ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಇಂದು ಭಾನುವಾರ 2024ರ ಜೂನ್ 30 ರಂದು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಭಾರತೀಯ ರಕ್ಷಣಾ ಸಚಿವಾಲಯವು ಬಿಡುಗಡೆ ಮಾಡಿರುವ ವಿಡಿಯೋ ಇಲ್ಲಿದೆ:


No comments:

Advertisement