Saturday, July 27, 2024

ಬೆಂಗಳೂರಿಗೆ ಬಂತು ಮಾಸ್ಟರ್‌ ಪ್ಲಾನರಿ

 ಬೆಂಗಳೂರಿಗೆ ಬಂತು ಮಾಸ್ಟರ್‌ ಪ್ಲಾನರಿ

ಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಹುಟ್ಟಿ, ಪಶ್ಚಿಮ ಕರಾವಳಿಯಾದ್ಯಂತ ಬೆಳೆದು ನಿಂತಿರುವ ಮಾಸ್ಟರ್‌ ಪ್ಲಾನರಿಯ ಕಾಂಕೂಡ್‌ ಎಂಬ ಸಿಮೆಂಟ್‌ ಗೃಹೋಪಯೋಗಿ ಉತ್ಪನ್ನಗಳು ಇದೀಗ ಬೆಂಗಳೂರಿಗೆ ಕಾಲಿಟ್ಟಿವೆ.

ತಮ್ಮ ತಂದೆ ಆರಂಭಿಸಿದ್ದ ತುಳಸಿಕಟ್ಟೆ ನಿರ್ಮಾಣದಿಂದ ಪ್ರೇರಣೆ ಪಡೆದು, ತಮ್ಮ ಉತ್ತಮ ಹುದ್ದೆಗೆ ರಾಜೀನಾಮೆ ನೀಡಿ ಸಿಮೆಂಟಿನಿಂದ ಬಗೆ ಬಗೆಯ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುವ ಈ ಉದ್ಯಮವನ್ನು ಆರಂಭಿಸಿದ್ದು ಎಸ್.ಕೆ. ಆನಂದ ಕುಮಾರ್‌.

ಮನೆಯ ಬಾಗಿಲು, ದಾರಂದ, ಕಿಟಕಿಗಳಿಂದ ಹಿಡಿದು, ಮಂಚ, ಮೇಜು, ಕುರ್ಚಿ, ಶೆಲ್ಫ್‌, ಮಕ್ಕಳ ಅಧ್ಯಯನದ ಬೆಂಚು, ಡೆಸ್ಕ್‌, ಕಂಪ್ಯೂಟರ್‌ ಟೇಬಲ್‌, ಏಣಿ, ಕಾಯಿ ಕೆರೆಯುವ ಕೆರೆಮಣೆ, ಮೆಟ್ಟುಕತ್ತಿ ಮಣೆ, ಪಂಪ್‌ ಶೆಡ್‌, ನಾಯಿಗೂಡು, ದೇವರ ಗೂಡು – ಹೀಗೆ ಅವರ ಅವಿಷ್ಕಾರಗಳು ಅನಂತ.

ಈ ಕಾಂಕೂಡ್‌ ಬಳಕೆಯಿಂದ ಕಾಡುನಾಶ ತಗ್ಗುತ್ತದೆ, ಮನೆಗೆ ಸಾಮಾನ್ಯ ಮರಕ್ಕಿಂತ ಸ್ವಲ್ಪ ಹೆಚ್ಚು ದರದಲ್ಲಿ, ಆದರೆ ಬೀಟಿಯಂತಹ ಉತ್ತಮ ಮರಕ್ಕಿಂತ ಕಡಿಮೆ ವೆಚ್ಚದಲ್ಲಿ ಅದರಷ್ಟೇ ಗಟ್ಟಿ ಮುಟ್ಟಾದ ಗೃಹೋಪಯೋಗಿ ಉತ್ಪನ್ನಗಳನ್ನು ನಿರ್ಮಿಸಬಹುದು. ಇಂತಹ ಅವಿಷ್ಕಾರಗಳಿಗೆ ಕೊನೆಯೇ ಇಲ್ಲ ಎನ್ನುತ್ತಾರೆ ಆನಂದ ಕುಮಾರ್.‌

ಅವರ ಉತ್ಪನ್ನಗಳಿಗೆ ಈಗ ಹೊಸ ಸೇರ್ಪಡೆ ʼಪ್ರಿ ಸ್ಟ್ರೇಸ್ಡ್ ಕಾಂಕ್ರೀಟ್‌ʼ {ಪೂರ್ವ ಒತ್ತಡ ಕಾಂಕ್ರೀಟ್} ತಂತ್ರಜ್ಞಾನ. ಹೆದ್ದಾರಿಗಳಲ್ಲಿ ನಿರ್ಮಿಸಲಾಗುವ ಪೂರ್ವ ನಿರ್ಮಿತ ವಸ್ತುಗಳ ಮೇಲ್ಸೇತುವೆಗಳಲ್ಲಿ ಬಳಸಲಾಗುವ ಈ ತಂತ್ರಜ್ಞಾನವು ಕಾಂಕೂಡ್‌ ಉತ್ಪನ್ನಗಳನ್ನು ಇನ್ನಷ್ಟು ಗಟ್ಟಿ ಮುಟ್ಟಾಗಿಸುತ್ತದೆ ಎನ್ನುತ್ತಾರೆ ಆನಂದ ಕುಮಾರ್.‌

ಪುತ್ತೂರಿನ ಶ್ರೀ ಮಹಾಲಿಂಗೇಶ್ವರನಿಗೆ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ʼಮಾಸ್ಟರ್‌ ಪ್ಲಾನರಿʼಯ ಬೆಂಗಳೂರು ಕಚೇರಿ 2024 ಜುಲೈ 27ರ ಶನಿವಾರ ಉದ್ಘಾಟನೆಗೊಂಡಿತು.

ಉತ್ಪನ್ನಗಳ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ:

ಶ್ಯಾಮ್‌ ಭಟ್‌ ಅವರಿಂದ ಮಾಸ್ಟರ್‌ ಪ್ಲಾನರಿ ಪರಿಚಯ ವಿಡಿಯೋ ನೋಡಿ:

ಮಾಸ್ಟರಿ ಪ್ಲಾನರಿಯ ಕಾಂಕೂಡ್‌ ಪೀಠೋಪಕರಣಗಳನ್ನು ನೋಡಲು ಬೆಂಗಳೂರಿನಲ್ಲಿ ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಬಹುದು:


ಮಾಸ್ಟರ್‌ ಪ್ಲಾನರಿ,
ಯಾದವ ಕಾಲೇಜು ರಸ್ತೆ,
ಆನಂದರಾವ್‌ ಸರ್ಕಲ್‌ ಸಮೀಪ,
ಮಾಧವನಗರ, ಬೆಂಗಳೂರು.

ಮೊಬೈಲ್:‌ 9731865321

-ನೆತ್ರಕೆರೆ ಉದಯಶಂಕರ

1 comment:

Anonymous said...

May God bless the New venture with every success 🤞
From S K Anand Kumar s Fan💐

Advertisement