ಇದು ʼಸುವರ್ಣʼ ನೋಟ..!
ಎಲ್ಲರೂ ೨೦೨೫ರ ಹೊಸ ವರ್ಷಕ್ಕಾಗಿ ಕಾದಿದ್ದಾಗ ಇವರು ಹಳೆಯದರ ನೆನಪಿನಲ್ಲಿ ಇದ್ದರು. ೨೦೨೪ರ ಸಂಜೆ ವಿಧಾನಸೌಧದ ಸುತ್ತ ಅಡ್ಡಾಡುತ್ತಿದ್ದರು. ಆಗ ಅವರಿಗೆ ಕಂಡು ಬಂದ - ಮುಗಿಲ ಮಧ್ಯೆ ಮರೆಯಾಗುತ್ತಿದ್ದ ಸೂರ್ಯ!.
ತನ್ನ ವರ್ಷ ಮುಗಿಯಿತು ಎಂದು ಮುಖವನ್ನು ಮರೆ ಮಾಚುತ್ತಿದ್ದಾನೇನೋ ಎಂಬಂತಿದ್ದ ಈ ಸೂರ್ಯನ ಕಡೆಗೆ ಕ್ಯಾಮರಾ ತಿರುಗಿಸಿದ ಈ ವ್ಯಕ್ತಿ, ಸೂರ್ಯನನ್ನು ಬಂಧಿಸಿಯೇ ಬಿಟ್ಟರು.
ಆಗ ಸೂರ್ಯ ಹೇಗಿದ್ದ ನೋಡಿ. ಇದು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಹಿಡಿದಿಟ್ಟ ೨೦೨೪ರ ಕೊನೆಯ ಸೂರ್ಯಾಸ್ತಮಾನದ ದೃಶ್ಯ. ಚಿತ್ರವನ್ನು ಕ್ಲಿಕ್ ಮಾಡಿ. ಸಮೀಪದಿಂದ ಅದನ್ನು ನೋಡಿ ಸವಿಯಿರಿ.
ಕೆಳಗಿನವುಗಳನ್ನೂ ಓದಿರಿ:
No comments:
Post a Comment