ಲಾಸ್ ಏಂಜೆಲಿಸ್: ಬೆಂಕಿ-ಬಿರುಗಾಳಿ
ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಲಾಸ್ ಏಂಜೆಲಿಸ್‌ನಲ್ಲಿ ೨೦೨೫ರ ಆರಂಭದ ವಾರದಲ್ಲೇ ಭಾರೀ ದಾವಾನಲ ಧಗ ಧಗಿಸುತ್ತಿದ್ದು ಅದಕ್ಕೆ ಗಾಳಿಯೂ ಇಂಬು ನೀಡಿದೆ.
ಸುಮಾರು ೨೬,೦೦೦ ಕಿ.ಮೀ.ಗೂ ಹೆಚ್ಚು ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದ್ದು, ೮೦ ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಇಡೀ ಪ್ರದೇಶದಲ್ಲಿ ʼಬೆಂಕಿ-ಬಿರುಗಾಳಿʼಯನ್ನು ಸೃಷ್ಟಿಸಿದೆ.
ಸುಮಾರು ಆರು ದಿನಗಳಿಂದ ಹರಡುತ್ತಿರುವ ಬೆಂಕಿ-ಬಿರುಗಾಳಿಯನ್ನು ಶಮನಗೊಳಿಸಲು ಸಮುದ್ರದಿಂದ ಹೆಲಿಕಾಪ್ಟರುಗಳಲ್ಲಿ ನೀರು ತಂದು ಸುರಿಯಲಾಗುತ್ತಿದೆ. ಆದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ.
ಸುಮಾರು ೨೬,೦೦೦ ಕಟ್ಟಡಗಳನ್ನು ಅಗ್ನಿ ಆಹುತಿ ಪಡೆದಿದ್ದು, ೨೪ ಮಂದಿ ಸುಟ್ಟು ಕರಕಲಾಗಿರುವುದು ದೃಢ ಪಟ್ಟಿದೆ.
ಸುಮಾರು ೧೫೦ ಬಿಲಿಯನ್ ಡಾಲರ್ ನಷ್ಟು ನಷ್ಟ ಸಂಭವಿಸಿದೆ. ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಇದು ಅತಿ ಭೀಕರ ಕಾಳ್ಗಿಚ್ಚು ದುರಂತ ಎಂದು ಕ್ಯಾಲಿಫೋರ್ನಿಯಾ ಗವರ್ನರ್ ಗವಿನ್ ನ್ಯೂಸಮ್ ಹೇಳಿದ್ದಾರೆ.
ದುರಂತದ ಅಗಾಧತೆ, ಶಮನ ಕಾರ್ಯಾಚರಣೆಯನ್ನು ಮೇಲಿನ ವಿಡಿಯೋದಲ್ಲಿ ನೋಡಿ.
ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ
(ಮೇಲಿನ ಚಿತ್ರ ಕ್ಲಿಕ್ ಮಾಡಿ ನೋಡಿ. ಕೇವಲ ರೂ. 350/- ಪಾವತಿಸಿ ಈ👆 ಡಿಜಿಟಲ್ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)
No comments:
Post a Comment