ದೇಗುಲ ವಾರ್ಷಿಕೋತ್ಸವ: ಪಂಚಹೋಮ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವವು ೨೦೨೫ ಫೆಬ್ರುವರಿ ೨೦ ಗುರುವಾರ ಸಂಪನ್ನಗೊಂಡಿತು.
ವಿಡಿಯೋ ನೋಡಲು ಎಡಬದಿಯ ಚಿತ್ರ ಕ್ಲಿಕ್ ಮಾಡಿರಿ.
ದೇವಾಲಯಕ್ಕೆ
ಒಂದು ವರ್ಷ ತುಂಬಿದ ಸಲುವಾಗಿ ಈ ಸಂದರ್ಭದಲ್ಲಿ ಪಂಚಹೋಮಗಳ ಸಲುವಾಗಿ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ,
ಶ್ರೀ ಆಂಜನೇಯ, ಶ್ರೀ ಸುಬ್ರಹ್ಮಣ್ಯ ಹಾಗೂ ನವಗ್ರಹ ದೇವತೆಗಳನ್ನು ಸ್ಥಾಪಿಸಿ ಅರ್ಚನೆ ನೆರವೇರಿಸಲಾಯಿತು.
ಆ ಬಳಿಕ ಶ್ರೀ ಗಣಪತಿ ಅಥರ್ವ ಶೀರ್ಷ ಹೋಮ, ಶ್ರೀ ಶ್ರೀ ವೆಂಕಟೇಶ್ವರ ಮೂಲಮಂತ್ರ ಹೋಮ,ಶ್ರೀ ಆಂಜನೇಯ ಮೂಲಮಂತ್ರ ಹೋಮ, ನವಗ್ರಹ ಹೋಮ, ಸರ್ಪ ಸೂಕ್ತ ಹೋಮಗಳನ್ನು ನಡೆಸಲಾಯಿತು. ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್ ಮಾಡಿರಿ.
ಪಂಚಹೋಮಗಳ ಬಳಿಕ ಮಹಾಮಂಗಳಾರತಿ ನಡೆಯಿತು. ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್ ಮಾಡಿರಿ.
ಸಂಜೆ ಭಕ್ತರು ಭಜನೆ ಸೇವೆ ಸಲ್ಲಿಸಿದರು.
ಆಸುಪಾಸಿನ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀ ಮುನಿರಾಜು ಕುಟುಂಬದವರು
ಪ್ರಸಾದ ಸೇವೆಯನ್ನು ಒದಗಿಸಿದರು. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.
ಇವುಗಳನ್ನೂ ಓದಿರಿ:
No comments:
Post a Comment