ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ
ಬೆಂಗಳೂರು: ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರದಿಂದ ನೀಡಲಾಗುವ ೨೦೨೫ರ ಸಾಲಿನ ರಾಷ್ಟ್ರೀಯ ಪಂಚಾಯಿತಿ ವಿಶೇಷ ಪ್ರಶಸ್ತಿಯ ಕಿರೀಟ ಕರ್ನಾಟಕದ ಹಾಸನ ಜಿಲ್ಲೆ ಸಕಲೇಶಪುರ ಬ್ಲಾಕಿನ ಬಿರಡಹಳ್ಳಿ ಗ್ರಾಮದ ಮುಡಿಗೆ ಏರಿದೆ.
ಕೇಂದ್ರ ಸರ್ಕಾರವು ವಿಶ್ವಸಂಸ್ಥೆಯು
ನಿಗದಿ ಪಡಿಸಿರುವ ೧೭ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಗ್ರಾಮ
ಪಂಚಾಯಿತಿಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡುತ್ತಿದ್ದು ಅದರಲ್ಲಿ ಹವಾಮಾನ/ ಪರಿಸರ ರಕ್ಷಣೆ ವಿಚಾರದಲ್ಲಿ
ಮಾಡಿರುವ ಸಾಧನೆಗಾಗಿ ಬಿರಡಹಳ್ಳಿ ಗ್ರಾಮ ಪಂಚಾಯಿತಿ ವಿಶೇಷ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.
ಇಡೀ ಗ್ರಾಮದ ಕಚೇರಿ,
ಮನೆ, ರಸ್ತೆಗಳಲ್ಲಿ ಸೌರ ದೀಪಗಳ ಅಳವಡಿಕೆ, ತೋಟಗಳಲ್ಲಿ ಮೋಟಾರುಗಳ ಚಾಲನೆಗೆ ಸೌರಶಕ್ತಿಯ ಬಳಕೆ, ಮನೆಗಳಲ್ಲಿ
ಪರ್ಯಾಯ ಇಂಧನಕ್ಕಾಗಿ ಜೈವಿಕ ಅನಿಲದ ಬಳಕೆಯಂತಹ ಕ್ರಮಗಳ ಅನುಷ್ಠಾನಕ್ಕಾಗಿ ಬಿರಡಹಳ್ಳಿ ಗ್ರಾಮಕ್ಕೆ
ಕೇಂದ್ರದ ಈ ಪುರಸ್ಕಾರ ಲಭ್ಯವಾಗಿದೆ.
ಬಡತನ ಮುಕ್ತ ಮತ್ತು ವರ್ಧಿತ ಜೀವನೋಪಾಯ ಪಂಚಾಯತ್, ಆರೋಗ್ಯಪೂರ್ಣ ಪಂಚಾಯತ್, ಮಕ್ಕಳ ಸ್ನೇಹಿ ಪಂಚಾಯತ್, ಜಲ
ಸಮೃದ್ಧ ಪಂಚಾಯತ್, ಸ್ವಚ್ಛ ಮತ್ತು ಹಸಿರು ಪಂಚಾಯತ್, ಪಂಚಾಯಿತಿಯಲ್ಲಿ ಸ್ವಾವಲಂಬಿ ಮೂಲಸೌಕರ್ಯ, ಸಾಮಾಜಿಕವಾಗಿ ನ್ಯಾಯಯುತ ಮತ್ತು
ಸಾಮಾಜಿಕವಾಗಿ ಸುರಕ್ಷಿತ ಪಂಚಾಯತ್, ಉತ್ತಮ ಆಡಳಿತವುಳ್ಳ ಪಂಚಾಯತ್
ಹಾಗೂ ಮಹಿಳಾ ಸ್ನೇಹಿ ಪಂಚಾಯತ್- ಈ ೯ ವಿಷಯಗಳಲ್ಲಿ ಯಾವುದಾದರೂ ವಿಷಯದಲ್ಲಿ ವಿಶೇಷ ಸಾಧನೆ ಮಾಡಿದ
ಪಂಚಾಯಿತಿಗಳಿಗೆ ೭ ವಿಶೇಷ ವರ್ಗದ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ.
ಮೇಲೆ ಹೇಳಿದ ೯ ವಿಷಯಗಳಲ್ಲಿ ಉನ್ನತ ಸಾಧನೆ ಮಾಡಿದ ೩ ಗ್ರಾಮ ಪಂಚಾಯಿಗಳಿಗೆ
ದೀನ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ.
ಎಲ್ಲ ವಿಷಯಗಳ ಅಡಿಯಲ್ಲಿ ಅತ್ಯಧಿಕ ಸರಾಸರಿ ಅಂಕಗಳನ್ನು ಪಡೆದು ಉನ್ನತ ಸಾಧನೆ ಮಾಡಿದ ಮೂರು 3
ಗ್ರಾಮ ಪಂಚಾಯತಿಗಳು, ಬ್ಲಾಕ್ ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ್ ವಿಕಾಸ್
ಪುರಸ್ಕಾರ,
ಸ್ವತಃ ಆದಾಯದ ಮೂಲವನ್ನು (OSR) ಸಜ್ಜುಗೊಳಿಸಲು ಮತ್ತು ವೃದ್ಧಿಸಲು
ಮಾಡಿದ ಪ್ರಯತ್ನಗಳಿಗಾಗಿ 3 ಗ್ರಾಮ ಪಂಚಾಯತಿಗಳಿಗೆ ಆತ್ಮ ನಿರ್ಭರ್ ಪಂಚಾಯತ್ ವಿಶೇಷ
ಪ್ರಶಸ್ತಿ,
ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆ ಮತ್ತು ನವೀಕರಿಸಬಹುದಾದ ಇಂಧನ ಮೂಲದ ಬಳಕೆಯನ್ನು
ಸಾಧಿಸಿದ 3 ಗ್ರಾಮ ಪಂಚಾಯತಿಗಳಿಗೆ ಹವಾಮಾನ ಕ್ರಮ ಅಥವಾ ಪರಿಸರ ರಕ್ಷಣಾ ವಿಶೇಷ
ಪ್ರಶಸ್ತಿ,
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಗ್ರಾಮ ಪಂಚಾಯತಿಗಳಿಗೆ ಸಾಂಸ್ಥಿಕ ಬೆಂಬಲವನ್ನು
ನೀಡಿದ 3 ಸಂಸ್ಥೆಗಳಿಗೆ ಪಂಚಾಯತ್ ಕ್ಷಮತಾ ನಿರ್ಮಾಣ್ ಸರ್ವೋತ್ತಮ್ ಸಂಸ್ಥಾನ ಪುರಸ್ಕಾರ,
ನಂತರದ ವರ್ಷಗಳಲ್ಲಿ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳಿಗೆ ಅರ್ಹತೆ ಪಡೆದ ಮತ್ತು ಶಾರ್ಟ್‌ಲಿಸ್ಟ್
ಮಾಡಲಾದ ಒಂದು ಗ್ರಾಮ ಪಂಚಾಯತಿಗೆ ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್
ಸತತ್ ವಿಕಾಸ್ ಪುರಸ್ಕಾರ,
ಹಾಗೂ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿಗಳಿಂದ
ಶೇಕಡಾ ೯೦ಕ್ಕಿಂತ ಉತ್ತಮ
ಪಾಲ್ಗೊಳ್ಳುವಿಕೆಗಾಗಿ ಒಂದು ಪಂಚಾಯಿತಿಗೆ ಅತ್ಯುತ್ತಮ ಪಾಲ್ಗೊಳ್ಳುವಿಕೆ ಪ್ರಶಸ್ತಿಯನ್ನು ಕೇಂದ್ರ
ಸರ್ಕಾರ ನೀಡುತ್ತಿದೆ.
ಕೇಂದ್ರ ಸರ್ಕಾರ ನೀಡುತ್ತಿರುವ ಈ ಪ್ರಶಸ್ತಿಗಳಲ್ಲಿ ಹವಾಮಾನ ಕ್ರಮ
ಅಥವಾ ಪರಿಸರ ರಕ್ಷಣೆಗಾಗಿ ನೀಡುವ ಇನ್ನೆರಡು ಪ್ರಶಸ್ತಿಗಳನ್ನು ಮಹಾರಾಷ್ಟ್ರದ ಡವ್ವಾ ಎಸ್ ಗ್ರಾಮ
ಪಂಚಾಯಿತಿ ಮತ್ತು ಬಿಹಾರಿನ ಮೋತಿಪುರ ಗ್ರಾಮ ಪಂಚಾಯಿತಿ ಹಂಚಿಕೊಂಡಿವೆ.
ಆತ್ಮ ನಿರ್ಭರ ಗ್ರಾಮ ಪಂಚಾಯಿತಿ ಪ್ರಶಸ್ತಿಯನ್ನು ತೆಲಂಗಾಣದ ಮಾಲ್
ಗ್ರಾಮ ಪಂಚಾಯಿತಿ, ಒಡಿಶಾದ ಹತ್ಬದ್ರಾ ಗ್ರಾಮ ಪಂಚಾಯಿತಿ, ಆಂದ್ರ ಪ್ರದೇಶದ ಗೊಲ್ಲಪುಡಿ ಗ್ರಾಮ ಪಂಚಾಯಿತಿ
ಪಡೆದುಕೊಂಡಿವೆ.
ಪಂಚಾಯತ್ ಕ್ಷಮತಾ ನಿರ್ಮಾಣ ಸರ್ವೋತ್ತಮ ಸಂಸ್ಥಾನ ಪುರಸ್ಕಾರಕ್ಕೆ
ಕೇರಳದ ಸ್ಥಳೀಯ ಆಡಳಿತ ಸಂಸ್ಥೆ, ಒಡಿಶಾದ ರಾಜ್ಯ ಗ್ರಾಮೀಣ
ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮತ್ತು ಅಸ್ಸಾಮಿನ ರಾಜ್ಯ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ
ಸಂಸ್ಥೆ ಪಾತ್ರವಾಗಿದೆ.
ಅಭಿನಂದನೆ
ಆತ್ಮ ನಿರ್ಭರ ಗ್ರಾಮ ಪಂಚಾಯಿತಿಗಳ ಸಲುವಾಗಿ ಶ್ರಮಿಸುತ್ತಿರುವ ಹಾಗೂ ಇದಕ್ಕಾಗಿಯೇ ಪುಸ್ತಕಗಳನ್ನು ಬರೆದಿರುವ ಬೆಂಗಳೂರಿನ ಸಂಪೂರ್ಣ ಸ್ವರಾಜ್ ಫೌಂಡೇಶನ್ ಸಂಸ್ಥಾಪಕ ಡಾ. ಶಂಕರ ಕೆ ಪ್ರಸಾದ್ ಹಾಗೂ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ವೃದ್ಧಿಗಾಗಿ ಶ್ರಮಿಸುತ್ತಿರುವ ರೆಸ್ ಗೌ (ಫೌಂಡೇಶನ್ ಫಾರ್ ರೆಸ್ಪಾನ್ಸಿವ್ ಗವರ್ನೆನ್ಸ್) ಸಂಸ್ಥೆಯ ಹಿರಿಯ ರಾಜ್ಯ ಒಡನಾಡಿ ಶೈಲಜಾ ಎಸ್ ಅವರು ಬಿರಡಹಳ್ಳಿ ಗ್ರಾಮ ಪಂಚಾಯಿತಿಯನ್ನು ಈ ಸಾಧನೆಗಾಗಿ ಅಭಿನಂದಿಸಿದ್ದಾರೆ.
ಇವುಗಳನ್ನೂ ಓದಿರಿ:
ರೆಸ್ಪಾನ್ಸಿವ್ ಗವರ್ನೆನ್ಸ್ ಗೆ ʼಸಂಪೂರ್ಣʼ ಸಹಕಾರ
ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್ ಭರವಸೆ
ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……
ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ
ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕ ಮತ್ತು ಅದರ ಇಂಗ್ಲಿಷ್ ಆವೃತ್ತಿ ರಿಬೂಟಿಂಗ್ ಡೆಮಾಕ್ರಸಿ ಇನ್ ಗ್ರಾಮ ಪಂಚಾಯತ್ಸ್ ಪುಸ್ತಕದ ಡಿಜಿಟಲ್ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು ದರ ಪಾವತಿಸಿ ಡಿಜಿಟಲ್ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್ ನಂಬರ್ 9480215706 ಅಥವಾ 9845049970.
ಡಿಜಿಟಲ್ ಪುಸ್ತಕ ನೋಡಲು ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿರಿ:
No comments:
Post a Comment